Slide
Slide
Slide
previous arrow
next arrow

ಕ್ರಿಮ್ಸ್ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

300x250 AD

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಸಂಸ್ಥೆಯ ಮುಖ್ಯಸ್ಥರು ಹಾಗೂ ನಿರ್ದೇಶಕರಾದ ಡಾ.ಗಜಾನನ ನಾಯಕರವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ, ಅಂಬೇಡ್ಕರರವರ ಜೀವನ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತರಕರ್‌ರವರು ಅಂಬೇಡ್ಕರರವರು ಕೇವಲ ವ್ಯಕ್ತಿಯಲ್ಲ. ಮಹಾಚೇತನ ಹಾಗೂ ಅವರು ಜೀವನದಲ್ಲಿ ಬಂದ ಅಡೆತಡೆಗಳನ್ನು ಎದುರಿಸಿ ಅವರು ಸಾಧಿಸಿದ ರೀತಿ ನೀವು ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.
ಪ್ರಾಂಶುಪಾಲರಾದ ಡಾ.ಶಿವಕುಮಾರ ಜಿ.ಎಲ್.ರವರು ಅಂಬೇಡ್ಕರರವರ ಸಾಧನೆ, ಚಿಂತನೆ ಹಾಗೂ ಅವರಲ್ಲಿರುವ ಜ್ಞಾನ ಭಂಡಾರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಆರ್.ಎಂ.ಓ ಡಾ.ಮಂಜುನಾಥ ಭಟ್‌ರವರು ಅಂಬೇಡ್ಕರರವರು ಶಿಕ್ಷಣ ತಜ್ಞರು, ಸಂವಿಧಾನ ಶಿಲ್ಪಿ ಹಾಗೂ ಜ್ಞಾನದ ಸಂಕೇತ ಎಂದು ಬಿರುದು ಪಡೆದವರು ಅವರಿಗೆ ಈ ದಿನದಂದು ಕೃತಜ್ಞತೆ ಸಲ್ಲಿಸೋಣ ಎಂದು ಹೇಳಿದರು.
ಉಪ ವೈದ್ಯಕೀಯ ಅಧೀಕ್ಷಕ ಡಾ.ಮಧುಕರ ಕೆ.ಟಿ. ದೇಶದ ಅಭಿವೃದ್ಧಿಗೆ ಅಂಬೇಡ್ಕರವರ ಕೊಡುಗೆಗಳನ್ನು ಸ್ಮರಿಸಿದರು. ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅಜಯ ಟಿ.ಆರ್.ಅಂಬೇಡ್ಕರರವರ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಶಿವಕುಮಾರ ಆರ್.ಜಿ. ಸ್ವಾಗತ ಭಾಷಣ ಮಾಡಿದರು. ದ್ವಿತೀಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಶರಣ್ಯಾ ಭಕ್ತಿಗೀತೆಯನ್ನು ಹಾಡಿದರು.

300x250 AD

ಈ ಸಂದರ್ಭದಲ್ಲಿ ಎಲ್ಲ ವಿಭಾಗದ ಪ್ರಾಧ್ಯಾಪಕ, ವೈದ್ಯರು, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು, ಶುಶ್ರೂಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಬಿ.ಎಂ. ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಪೂಜಾ ಹುದ್ದಾರ ವಂದನಾರ್ಪಣೆಯೊoದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Share This
300x250 AD
300x250 AD
300x250 AD
Back to top