• Slide
  Slide
  Slide
  previous arrow
  next arrow
 • ಅಂತರ್‌ರಾಜ್ಯ ಬೈಕ್ ಕಳ್ಳರ ಬಂಧನ: 17 ಬೈಕ್‌ಗಳ ಜಪ್ತಿ

  300x250 AD

  ದಾಂಡೇಲಿ: ಅಂತರ್‌ಜಿಲ್ಲಾ ಮತ್ತು ಅಂತರ್‌ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿ, ಆಪಾದಿತರಿಂದ 17 ಬೈಕ್‌ಗಳನ್ನು ನಗರ ಪೊಲೀಸ್ ಠಾಣಾ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.
  ಹಳಿಯಾಳ ತಾಲೂಕಿನ ದೇಶಪಾಂಡೆ ನಗರದ ನಿವಾಸಿ, ಹಾಲಿ ಕೋಗಿಲಬನ ಗ್ರಾಮದ ನಿವಾಸಿಯಾಗಿರುವ ಷಾನವಾಜ್ ಯಾನೆ ನವಾಜ್ ಶಬ್ಬೀರ್ ಅಹ್ಮದ್ ಬಸಾಪುರ, ಹಳೆದಾಂಡೇಲಿಯ ನಿವಾಸಿ ಇರ್ಷಾದ್ ಜಾಫರಸಾಬ್ ಚೌಧರಿ ಮತ್ತು ಪಟೇಲ್ ನಗರದ ನಿವಾಸಿ ಮುಸ್ತಾಕ ಅಹ್ಮದ್ ಮುಕ್ತುಂ ಸಾಬ ಮೂಲೆಮನೆ ಬಂಧಿತರು.
  ಏ.07ರ0ದು ರಾತ್ರಿ ಪಿಎಸೈ ಐ.ಆರ್.ಗಡ್ಡೇಕರ್ ಅವರ ನೇತೃತ್ವದಲ್ಲಿ ಪೊಲಿಸರು ನಗರದ ಹಳಿಯಾಳ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರನ್ನು ತಡೆದು ನಿಲ್ಲಿಸಿ, ವಾಹನದ ಕುರಿತಂತೆ ತಪಾಸಣೆ ನಡೆಸಿದಾಗ ಸಂಬ0ಧಿತ ದ್ವಿಚಕ್ರ ವಾಹನಕ್ಕೆ ಯಾವುದೇ ದಾಖಲೆಗಳು ಇಲ್ಲದಿದ್ದ ಕಾರಣ, ನಗರ ಠಾಣೆಗೆ ಕರೆದೊಯ್ದು ವಿಚಾರಣೆಯನ್ನು ನಡೆಸಲಾಗಿತ್ತು. ವಿಚಾರಣೆಯಲ್ಲಿ ದ್ವಿಚಕ್ರ ವಾಹನ ಕದ್ದಿದ್ದು ಎನ್ನುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಬ್ಬರ ಮೇಲೆ ಪಿಎಸೈ ಪಿ.ಬಿ.ಕೊಣ್ಣೂರು ಅವರು ಪ್ರಕರಣವನ್ನು ದಾಖಲಿಸಿ, ತನಿಖೆಯನ್ನು ಕೈಗೊಂಡಿದ್ದರು.
  ಈ ಪ್ರಕರಣದ ಕುರಿತಂತೆ ವಿಸ್ತೃತ ತನಿಖೆ ನಡೆಸಬೇಕೆಂಬ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಎನ್.ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ.ಜಯಕುಮಾರ್, ದಾಂಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಕಟಗಿಯವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್.ಲೋಕಾಪುರ ಅವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸೈಗಳಾದ ಐ.ಆರ್.ಗಡ್ಡೇಕರ್ ಮತ್ತು ಪಿ.ಬಿ.ಕೊಣ್ಣೂರು, ಎಎಸೈಗಳಾದ ಬಸವರಾಜ ಒಕ್ಕುಂದ ಮತ್ತು ನಾರಾಯಣ ರಾಥೋಡ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ದೇಮಟ್ಟಿ, ಭೀಮಪ್ಪ ಕದರಮಂಡಲಗಿ, ಮಂಜುನಾಥ್ ಎಚ್.ಶೆಟ್ಟಿ, ನಾಗರಾಜ ಬಮ್ಮಿಗಟ್ಟಿ, ಜಯನಗೌಡ, ಕೃಷ್ಣ.ಬಿ, ಚಿನ್ಮಯ ಪತ್ತಾರ್, ವಿನಾಯಕ ನಾಯ್ಕ, ಸದ್ದಾಂ ಸೈಯದ್, ದಶರಥ ಲಕ್ಮಾಪುರ ಹಾಗೂ ಇನ್ನಿತರ ಸಿಬ್ಬಂದಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಪ್ರಕರಣದ ಇನ್ನಿತರ ಆಪಾದಿತರನ್ನು ಪತ್ತೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿ, ಕಳ್ಳತನ ಮಾಡಲಾಗಿದ್ದ ಒಟ್ಟು 17 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
  ಆರೋಪಿಗಳು ದಾಂಡೇಲಿ, ಹುಬ್ಬಳ್ಳಿ, ಧಾರವಾಡ, ಕಿತ್ತೂರು, ಎಂ.ಕೆ.ಹುಬ್ಬಳ್ಳಿ, ಬಿಜಾಪುರ, ಬೈಲಹೊಂಗಲ, ಖಾನಪುರ, ಬೆಳಗಾವಿ, ಸವದತ್ತಿ, ಹಾವೇರಿ ಮತ್ತು ಮಿರಾಜಿನಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top