Slide
Slide
Slide
previous arrow
next arrow

ಆದರ್ಶ ವನಿತಾ ಸಮಾಜದ ಬೇಸಿಗೆ ಶಿಬಿರ ಸಂಪನ್ನ

300x250 AD

ಶಿರಸಿ: ನಗರದ ಆದರ್ಶ ವನಿತಾ ಸಮಾಜ ಮಹಿಳಾ ಸಂಘಟನೆಯಿಂದ ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ 10ದಿನಗಳ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು.

5ರಿಂದ 7ತರಗತಿವರೆಗಿನ ಹೆಣ್ಣುಮಕ್ಕಳಿಗಾಗಿ ನಡೆದ ಬೇಸಿಗೆ ಶಿಬಿರವು ಹಲವಾರು ವಿಶೇಷತೆಗಳನ್ನೊಳಗೊಂಡಿತ್ತು. ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳು, ಮಾಹಿತಿ, ಮಾರ್ಗದರ್ಶಗಳು ದೊರೆತವು.

ಕರಕುಶಲ ಕಲೆ, ಹಾಡು, ಭಜನೆ, ಶ್ಲೋಕಗಳು, ರಂಗೊಲಿ, ಚಿತ್ರಕಲೆ, ಕವನ ರಚನೆ, ನಾಟಕ, ಮರೆತ ಹಾಡುಗಳು, ಜಾನಪದ ನೃತ್ಯ, ಯೋಗಾಸನ ಮುಂತಾದ ತರಬೇತಿ ನೀಡಲಾಯಿತು. ನಾಟಕದ ಬಗ್ಗೆ ಬಿಂದು ಹೆಗಡೆ, ಯೋಗಾಸನ ಕುರಿತು ಶ್ಯಾಮಲಾ ಹೆಗಡೆ, ಜಾನಪದ ನೃತ್ಯ ಕಲೆಯ ಕುರಿತು ಚಂದ್ರಕಲಾ ಕೊಡಿಯಾರ್ ಪ್ರತಿದಿನವು ಮಾರ್ಗದರ್ಶನ ಮಾಡಿದರು.
ಹೆಣ್ಣುಮಕ್ಕಳಿಗೆ ದೈಹಿಕ ಆರೊಗ್ಯ ಕುರಿತು ಡಾ.ಸ್ವಾತಿ ವಿನಾಯಕ, ಆಹಾರ-ಆರೋಗ್ಯ ಬಗ್ಗೆ ಡಾ.ರವಿಕಿರಣ ಪಟವರ್ಧನ, ಆರೋಗ್ಯಕ್ಕೆ ಪೂರಕ ಔಷಧೀಯ ಸಸ್ಯಗಳ ಕುರಿತು ಉಮಾಪತಿ ಭಟ್ಟ ಸಲಹೆ ನೀಡಿದರು. ಮಕ್ಕಳು ಮತ್ತು ಪಾಲಕರ ಬಾಂಧವ್ಯ, ಮೊಬೈಲ್ ಅಸಮರ್ಪಕ ಬಳಕೆಯಿಂದಾಗುವ ಸೈಬರ್ ಕ್ರೈಂ ಬಗ್ಗೆ ಶೈಲಜಾ ಗೋರ್ನಮನೆ, ಚಿತ್ರಕಲೆ ಬಗ್ಗೆ ರೇಖಾ ಭಟ್ಟ, ಕ್ರಾಪ್ಟ್ ವಿಷಯವಾಗಿ ಸೀಮಾ ಅಬ್ರಿ, ನೈಸರ್ಗಿಕ ಬಣ್ಣಗಳ ಕುರಿತು ಸೀಮಾ ಭಟ್ಟ ವಿವರಣೆ ನೀಡಿದರು.
ಶಿಬಿರ ಆರಂಭದ ದಿನ ಸಾಂತ್ವನ ಮಹಿಳಾ ವೇದಿಕೆ ಅಧ್ಯಕ್ಷೆ ಜ್ಯೋತಿ ಭಟ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಬಿರದ ಸಮಾರೋಪ ಕಾರ್ಯಕ್ರಮ ಗುರುವಾರ ನಡೆಯಿತು. ಆದರ್ಶ ವನಿತಾ ಸಮಾಜ ಸಂಸ್ಥಾಪಕ ಅಧ್ಯಕ್ಷೆ ವಾಸಂತಿ ಹೆಗಡೆ, ಅಧ್ಯಕ್ಷೆ ಸೀತಾ ಕೂರ್ಸೆ, ಕಾರ್ಯದರ್ಶಿ ಶಾಂತಲಾ ಹೆಗಡೆ, ಸಂಪನ್ಮೂಲ ವ್ಯಕ್ತಿಗಳಾದ ಬಿಂದು ಹೆಗಡೆ, ಚಂದ್ರಕಲಾ ಕೊಡಿಯಾರ್, ಶ್ಯಾಮಲಾ ಹೆಗಡೆ ಉಪಸ್ಥಿತರಿದ್ದರು. ಜ್ಯೋತಿ ಹೆಗಡೆ, ಹೇಮಾ ಭಟ್ಟ, ಆಶಾ ಪ್ರಾರ್ಥಿಸಿದರು. ಸುಜಾತಾ ಮದ್ಗುಣಿ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top