ದಾಂಡೇಲಿ: ವಿಧಾನಸಭಾ ಚುನಾವಣೆಯ ನಿಮಿತ್ತ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ಯೋಧರು ಹಾಗೂ ನಗರ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ಸೋಮವಾರ ನಗರದಲ್ಲಿ ಪಥಸಂಚಲನ ನಡೆಸಿದರು.
ನಗರ ಪೊಲೀಸ್ ಠಾಣೆಯಿಂದ ಆರಂಭಗೊ0ಡ ಪಥಸಂಚಲನವು ನಗರದ ಬರ್ಚಿ ರಸ್ತೆ, ಕೆ.ಸಿ.ವೃತ್ತ, ಹಳಿಯಾಳ ರಸ್ತೆ, ಕುಳಗಿ ರಸ್ತೆ, ಪಟೇಲ್ ವೃತ್ತ, ಲಿಂಕ್ ರಸ್ತೆ, ಜೆ.ಎನ್.ರಸ್ತೆ, ಸೋಮಾನಿ ವೃತ್ತ ದಾಟಿ ಜೆ.ಎನ್.ರಸ್ತೆಯ ಮೂಲಕ ಸಾಗಿ ಕೊನೆಯಲ್ಲಿ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಸಂಪನ್ನಗೊ0ಡಿತು.
ಪಥಸ0ಚಲನ ಆರಂಭದ ಮುನ್ನ ಮಾತನಾಡಿದ ಡಿವೈಎಸ್ಪಿ ಶಿವಾನಂದ ಕಟಗಿಯವರು ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಯೋಧರನ್ನು ಕರೆಸಿಕೊಳ್ಳಲಾಗಿದೆ. ಶಾಂತಿಯು ಚುನಾವಣೆಗೆ ಸರ್ವರು ಸಹಕರಿಸಬೇಕೆಂದು ಕರೆ ನೀಡಿದರು.
ಪಥ ಸಂಚಲನದಲ್ಲಿ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಬಿ.ಎಸ್.ಲೋಕಾಪುರ, ಪಿಸೈಗಳಾದ ಐ.ಆರ್.ಗಡ್ಡೇಕರ್, ಪಿ.ಬಿ.ಕೊಣ್ಣೂರು, ಕೃಷ್ಣೆಗೌಡ, ಶಿವಾನಂದ ನಾವಾದಗಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಿಆರ್‌ಪಿಎಫ್ ಯೋಧರು ಭಾಗವಹಿಸಿದ್ದರು.