Slide
Slide
Slide
previous arrow
next arrow

ಕೊರೋನಾದ ಬಳಿಕ ದೇಶ ಚೇತರಿಸಿಕೊಳ್ಳಲು ಪ್ರಧಾನಿ ಮೋದಿ ಕಾರಣ: ಸ್ವರ್ಣವಲ್ಲೀ ಶ್ರೀ

300x250 AD

ಹೊನ್ನಾವರ: ಪಟ್ಟಣದ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಪಟ್ಟಣದ ದುರ್ಗಾಕೇರಿಯ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ಸ್ವರ್ಣವಲ್ಲೀ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಿತು.

ಸಭಾ ಕಾರ್ಯಕ್ರಮದ ಮೊದಲು ಹೋಮ ಹವನ ನೆರವೇರಿತು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸ್ವರ್ಣವಲ್ಲೀ ಗಂಗಾಧರೇ0ದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನದಲ್ಲಿ ಕರೋನಾ ನಂತರ ದೇಶ ಕೆಲವೇ ಸಮಯದಲ್ಲಿ ಆರ್ಥಿಕವಾಗಿ ಮತ್ತೆ ಚೇತನಗೊಂಡಿದೆ. ಇದಕ್ಕೆ ಈಗಿನ ನಮ್ಮ ಪ್ರಧಾನಮಂತ್ರಿಯವರ ಒಂದು ಚಾಣಾಕ್ಷತನ ಬಹು ಮುಖ್ಯವಾದ ಕಾರಣ. ದೇವರ ಅನುಗ್ರಹ ಜೊತೆ ಮನುಷ್ಯನ ಪ್ರಯತ್ನ ಸೇರಿದರೆ ಅದ್ಭುತವಾದ ಪ್ರಯೋಜನ ಸಿಗುತ್ತದೆ. ಈಗಿನ ನಮ್ಮ ದೇಶದ ಆರ್ಥಿಕ ಪುನಶ್ಚೇತನ ಉದಾಹರಣೆಯಾಗಿದೆ ಎಂದರು.

ನಾವುಗಳು ಸಂಸ್ಥೆ ಬೆಳೆಯಬೇಕು ಎಂದರೆ ದೇವರ ಅನುಗ್ರಹ ಮತ್ತು ನಮ್ಮ ಪ್ರಯತ್ನಗಳನ್ನು ಜೊತೆ ಜೊತೆಯಾಗಿರಬೇಕು. ಸಮಾಜದ ಬಂಧುಗಳು ಸಂಘದಲ್ಲಿ ತಮ್ಮ ಹಣವನ್ನ ತೊಡಗಿಸಬೇಕು. ಕೇವಲ ಠೇವಣಿ ಇಡುವುದರಿಂದ ಸಂಘ ಬೆಳೆಯುವುದಿಲ್ಲ, ಸಂಘ ನಿಜವಾಗಿ ಬೆಳೆಯುವುದು ಸಾಲಗಾರರಿಂದ. ಸಾಲ ತೆಗೆದುಕೊಂಡು ಹೋಗಿ ಸಕಾಲದಲ್ಲಿ ಬಡ್ಡಿ ಸಮೇತ ತುಂಬುವುದು. ಆಗಲೇ ನಿಜವಾಗಿಯೂ ಸಂಸ್ಥೆ ಬೆಳೆಯುವುದು,ಅದು ಎಲ್ಲ ಸಂಸ್ಥೆಯ ಗುಟ್ಟು. ಸಾಲವನ್ನು ನಾವು ನಮ್ಮ ಸಂಸ್ಥೆಯಲ್ಲಿ ಮಾಡಬೇಕು. ಜೊತೆಯಲ್ಲಿ ಬುದ್ದಿವಂತಿಕೆಯಿAದ ಮಾಡಬೇಕು. ಸಾಲವನ್ನು ಬಡ್ಡಿ ಸಮೇತ ತಿರುಗಿ ಕೊಡಲಿಕ್ಕೆ ಆಗುತ್ತದೆಯೇ? ಎಂದು ವಿವೇಚನೆ ಮಾಡಿ ಸಾಲ ಮಾಡಬೇಕು. ದುಡಿತವೇ ದುಡ್ಡಿನ ತಾಯಿ ನಿಜವಾದ ವಾಸ್ತವಿಕತೆ ಸಾಲ ತಗೊಂಡು ಹೋದವನು ಆ ದುಡ್ಡನ್ನ ಸರಿಯಾಗಿ ದುಡಿಮೆಗೆ ಉಪಯೋಗಿಸಬೇಕು. ಅವನು ಬೆಳೆದರೆ ಸಂಸ್ಥೆಯು ಬೆಳೆಯುತ್ತದೆ. ಸಕಾಲದಲ್ಲಿ ಬಡ್ಡಿ ತುಂಬುವುದು ನೆನಪಿಡಬೇಕು ಎಂದು ಸಲಹೆ ನೀಡಿದರು.

300x250 AD

ಸಂಘದ ಅಧ್ಯಕ್ಷ ರಾಜು ನಾಯ್ಕ ಮಂಕಿ ಮಾತನಾಡಿ, ಸಂಸ್ಥೆಗೆ ಅನೇಕ ಹಿರಿಯರು ಸಂಘಕ್ಕೆ ತಮ್ಮ ಸಹಾಯ ಹಸ್ತವನ್ನು ಚಾಚುತ್ತಾ ಬಂದಿದ್ದಾರೆ. ಇವತ್ತು ಅವರೆಲ್ಲರನ್ನು ನಾವು ನೆನಪಿಸಿಕೊಳ್ಳಬೇಕು. ಈ ಸಂಘ ಬೆಳೆಯಲು ಕಾರಣೀಕರ್ತರಾದವರಿಗೆ ನಾನು ಅಭಿನಂದಿಸುತ್ತೆನೆ. ಮೂರು ಶಾಖೆಯನ್ನು ಈಗಾಗಲೇ ನಾವು ತೆರೆದಿದ್ದು, ಇನ್ನು ಎರಡು ಶಾಖೆ ಆರಂಭಿಸಲು ಸರ್ಕಾರದ ಪರವಾನಗಿಯನ್ನು ಸಹ ನಾವು ಪಡೆದಿದ್ದೇವೆ. ಮುಂದಿನ ದಿನದಲ್ಲಿ ರಜತ ಮಹೋತ್ಸವಯ ಸ್ವಂತ ಕಟ್ಟಡದಲ್ಲೆ ಆಗಬೇಕು ಹೇಳುವಂತ ಅಭಿಲಾಷೆ ಇದೆ. ಗುರುಗಳ ಮತ್ತು ನಮ್ಮ ಎಲ್ಲ ಸಾರ್ವಜನಿಕರ, ಗ್ರಾಹಕರ ಆಶಯದಂತೆ ಈ ಸಂಸ್ಥೆ ಇನ್ನು ಹೆಮ್ಮರವಾಗಿ ಬೆಳಿಲಿಕ್ಕೆ ನಾವೆಲ್ಲರೂ ಆಶಿಸೋಣ ಎಂದರು.

ಸಂಘದ ಉಪಾಧ್ಯಕ್ಷ ರಾಜೇಶ ಸಾಳೇಹಿತ್ತಲ, ಮುಖ್ಯ ಕಾರ್ಯನಿರ್ವಾಹಕ ಯೋಗೀಶ ನಾಯ್ಕ, ಸಹಾಯಕ ವ್ಯವಸ್ಥಾಪಕರಾದ ವಾಸುದೇವ ಕಾಮತ್, ಎಸ್.ಕೆ.ನಾಯಕ್, ಕೆ.ನಾಗರಾಜ, ರಾಮದಾಸ್ ನಾಯ್ಕ, ಕೆ.ವಿ.ನಾಯ್ಕ, ಮೋಹನ. ಸಾಳೆಹಿತ್ತಲ್, ಸಂಘದ ನಿರ್ದೇಶಕರು ಮತ್ತಿತರಿದ್ದರು. ಸಭಾ ಕಾಯಕ್ರಮದ ನಂತರ ಮಕ್ಕಳಿಗೆ ಛದ್ಮವೇಶ ಸುಪ್ರಸನ್ನ ಮಹಾಗಣಪತಿ ಯಕ್ಷಗಾನ ಮಂಡಳಿ ಜಡ್ಡಿಕೇರಿ ಇವರಿಂದ ಶರಸೇತುಬಂಧ ಯಕ್ಷಗಾನ, ಮಂಗಳೂರಿನ ಸಂಜನಾ ಅಕಾಡೆಮಿ ಇವರಿಂದ ರಸಮಂಜರಿ, ಯೋಗ ಪ್ರದರ್ಶನ ನಡೆಯಿತು. ಸಂಘದ ಸಂಸ್ಥಾಪನಾ ಸಂದರ್ಭದ ನಿರ್ದೇಶಕರನ್ನು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top