ಕಾರವಾರ: ಇತ್ತೀಚೆಗೆ ರೋಟರಿ ಜಿಲ್ಲಾ ಪ್ರಾಂತಪಾಲ ಬೆಳಗಾವಿಯ ರೋ. ವೆಂಕಟೇಶ ದೇಶಪಾಂಡೆ ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಾರವಾರ ಅತ್ಯಂತ ಶ್ರಮಿಕ ಮೂವರು ಮಹಿಳೆಯರನ್ನು ಸಂಸ್ಥೆಯ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ರಾಘವೇಂದ್ರ ಜಿ. ಪ್ರಭು ಹಾಗೂ ಓಕೇಶನಲ್ ನಿರ್ದೇಶಕ ಅಮರನಾಥ ಶೇಟ್ಟಿ ನಿರ್ದೇಶನದಲ್ಲಿ ಸನ್ಮಾನಿಸಲಾಯಿತು.
ಗೌರವಿತರಾದ ಸಿಯಾ ಸಂದೇಶ ಗೊವೇಕರ ಎಂ.ಜಿ. ರೋಡ ಕಾರವಾರದ ವಾಯು ಮಾಲಿನ್ಯ ತಪಾಸಣಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಎರಡನೇಯದಾಗಿ ಶ್ರೀಮತಿ ಗಂಗುಬಾಯಿ ಮಹಾಬಳೇಶ್ವರ ನಾಯ್ಕ ಹೊಸಾಳಿ ಸಾವಯವ ಗೊಬ್ಬರನ್ನು ತಯಾರಿಸಿ ತೋಟಗಾರಿಕೆಗೆ ಹಾಗೂ ಉದ್ಯಾನ ವನಗಳಿಗೆ ಗೊಬ್ಬರವನ್ನು ವಿತರಿಸುತ್ತಾ ಬಂದಿರುತ್ತಾರೆ. ಮೂರನೇಯವರಾಗಿ ಶ್ರೀಮತಿ ವಿನಿತಾ ಮ್ಹಾಳಸೇಕರ ಕಾರವಾರದಲ್ಲಿ ಪ್ರಪ್ರಥಮವಾಗಿ ಮಹಿಳಾ ಪೆಟ್ರೋಲ್ ವಿತರಕರಾಗಿ ನಗರದ ಸರ್ದಾರ್ಜಿ ಪೆಟ್ರೊಲ್ ಪಂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಜಿಲ್ಲಾ ಪ್ರಾಂತಪಾಲರು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಪ್ರಾಂತಪಾಲ ದಾಂಡೇಲಿಯ ಪ್ರಕಾಶ ಶೆಟ್ಟಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು, ಅವರು ಕುಟುಂಬದರು, ಇನ್ನರ್‌ವ್ಹೀಲ್ ಸದಸ್ಯರು, ರೋರ‍್ಯಾಕ್ಟ್ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಗುರುದತ್ತ ಬಂಟರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರವನ್ನು ಶೈಲೇಶ ಹಳದೀಪೂರ ನಡೆಸಿಕೊಟ್ಟರು.