• Slide
    Slide
    Slide
    previous arrow
    next arrow
  • ಕಾಶ್ಮೀರ- ಕನ್ಯಾಕುಮಾರಿ ಹೆದ್ದಾರಿ‌ ಕನಸು‌ ಮುಂದಿನ ವರ್ಷ ನನಸು- ಗಡ್ಕರಿ

    300x250 AD

    ನವದೆಹಲಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಹೆದ್ದಾರಿಯ ಕನಸು ಮುಂದಿನ ವರ್ಷದ ಆರಂಭದ ವೇಳೆಗೆ ನನಸಾಗಲಿದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    “ಕಾಶ್ಮೀರದಿಂದ ಕನ್ಯಾಕುಮಾರಿ ರಸ್ತೆ ನಮಗೆ ಕನಸಾಗಿತ್ತು. ರೋಹ್ಟಾಂಗ್‌ನಿಂದ ಲಡಾಖ್‌ವರೆಗೆ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗುವುದು. ಲೇಹ್‌ನಿಂದ ಕಾರ್ಗಿಲ್‌ಗೆ ಬಂದು ಝೋಜಿಲಾ ಮತ್ತು ಝಡ್-ಮೋರ್ಹ್ ಸುರಂಗಗಳನ್ನು ಸೇರಲಾಗುತ್ತದೆ” ಎಂದಿದ್ದಾರೆ

    ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಂಸದೀಯ ಸಲಹಾ ಸಮಿತಿಯ ಎರಡನೇ ಸಭೆಯಲ್ಲಿ ಭಾಗವಹಿಸಲು ನಿತಿನ್ ಗಡ್ಕರಿ ಸೋಮವಾರ ಜಮ್ಮು-ಕಾಶ್ಮೀರಕ್ಕೆ ಬಂದಿದ್ದ ವೇಳೆ ಈ ಮಾಹಿತಿಯನ್ನು ನೀಡಿದ್ದಾರೆ.

    300x250 AD

    “ಹೊಸ ರಸ್ತೆ ದೆಹಲಿ ಮತ್ತು ಚೆನ್ನೈ ನಡುವಿನ ದೂರವನ್ನು 1,312 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡುತ್ತದೆ. ಈ ಕನಸು 2024 ರ ಆರಂಭದ ವೇಳೆಗೆ ನನಸಾಗಲಿದೆ” ಎಂದು ಅವರು ಹೇಳಿದರು.  2014 ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿದಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ರಸ್ತೆ ಮೂಲಸೌಕರ್ಯಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಿತು ಅಂದಿನಿಂದ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ 1.25 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೊಂಡಿದ್ದೇವೆ, ಈ ಯೋಜನೆಗಳು ಪೂರ್ಣಗೊಂಡ ನಂತರ, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಿಗರ ಭೇಟಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಜನರು ಸ್ವಿಟ್ಜರ್ಲೆಂಡ್‌ಗೆ ಹೋಗುತ್ತಾರೆ, ಆದರೆ ನಮ್ಮ ಜಮ್ಮು-ಕಾಶ್ಮೀರ ಹೆಚ್ಚು ಸುಂದರವಾಗಿದೆ” ಎಂದು ಗಡ್ಕರಿ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top