Slide
Slide
Slide
previous arrow
next arrow

ಅಂಕೋಲಾ ಮಹಿಳೆಯ ಸ್ಚಚ್ಛತಾ‌‌ ಕೆಲಸ‌‌ ಮೆಚ್ಚಿ ಗುರುತಿಸಿದ ಉದ್ಯಮಿ ಆನಂದ್ ಮಹೀಂದ್ರಾ

300x250 AD

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹಣ್ಣುಗಳನ್ನು ತಿಂದು ಅದನ್ನು ಸುತ್ತಿಕೊಟ್ಟ ಎಲೆಯನ್ನು ಅಲ್ಲೆ ಎಸೆದು ಹೋಗುತ್ತಾರೆ, ಆದರೆ ಇದನ್ನ ನೋಡಿದ ಹಣ್ಣುಗಳನ್ನ ಮಾರಾಟ ಮಾಡುವ ಆ ಮಹಿಳೆ ಪ್ರಯಾಣಿಕರು ಎಸೆದು ಹೋಗುವ ಎಲೆಗಳನ್ನು ತಾನೆ ಕೈಯಿಂದ ಹೆಕ್ಕಿ ಹಾಕುವ ಮೂಲಕ ಸ್ವಚ್ಛಗೊಳಿಸಿಸುತ್ತಿರುವ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಮನೋಭಾವ ಹೊಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಂಡ ವಿಶಿಷ್ಟ ಜನರನ್ನು ಗುರುತಿಸುವ ಆನಂದ್ ಮಹೀಂದ್ರಾ ಅವರು ಆ ಜನರನ್ನು ಲೋಕಕ್ಕೆ ಪರಿಚಯ ಮಾಡಿಕೊಡುತ್ತಾರೆ.

ಅದೇ ರೀತಿ ಜಿಲ್ಲೆಯ ಅಂಕೋಲಾ ಮಹಿಳೆಯ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಗಮನ ಸೆಳೆದಿದ್ದಾರೆ.ಆದರ್ಶ್ ಹೆಗಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು ಅಂಕೋಲಾ ಬಸ್ ನಿಲ್ದಾಣದಲ್ಲಿನ ಓರ್ವ ಮಹಿಳೆಯ ಸ್ವಚ್ಛ ಭಾರತ ಕಾಯಕದ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಜೊತಗೆ, “ಈ ಮಹಿಳೆ ಹಣ್ಣು ಮಾರಾಟಗಾರ್ತಿ ಮತ್ತು ಅವರು ಅಂಕೋಲಾ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಣ್ಣು ತಿಂದು ಬಳಿಕ ಎಲೆಗಳನ್ನು ಎಸೆಯುತ್ತಾರೆ, ಆದರೆ ಈ ಮಹಿಳೆ ಅಲ್ಲಿಗೆ ಹೋಗಿ ಎಲೆಗಳನ್ನು ತೆಗೆದುಕೊಂಡು ಕಸದ ಬುಟ್ಟಿಗೆ ಹಾಕುತ್ತಾರೆ. ಇದು ಅವರ ಕೆಲಸವಲ್ಲ ಆದರೂ ಅವರು ಅದನ್ನು ಮಾಡುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

300x250 AD

ಟ್ವಿಟ್ ಗಮನಿಸಿದ ಆನಂದ್ ಮಹೀಂದ್ರಾ ವಿಡಿಯೋ ಶೇರ್ ಮಾಡಿ, “ಇವರು ಭಾರತ ಸ್ವಚ್ಛ ಮಾಡುವ ನಿಜವಾದ, ಶಾಂತ ಹೀರೋಗಳು, ಆಕೆಯ ಪ್ರಯತ್ನಗಳು ಜನರ ಗಮನಕ್ಕೆ ಬಂದಿದೆ ಮತ್ತು ಮೆಚ್ಚುಗೆ ಪಡೆದಿವೆ ಎಂದು ಅವರು ತಿಳಿದುಕೊಳ್ಳಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ನೀವು ಆ ಪ್ರದೇಶದಲ್ಲಿ ವಾಸಿಸುವ ಯಾರನ್ನಾದರೂ ಕಂಡುಕೊಂಡರೆ ಮತ್ತು ಅವಳನ್ನು ಸಂಪರ್ಕಿಸಬಹುದೇ?” ಎಂದು ಕೇಳಿ ಟ್ವಿಟ್ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top