Slide
Slide
Slide
previous arrow
next arrow

ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಸಂಸ್ಕಾರಯುತ ಬೆಳವಣಿಗೆ ಸಾಧ್ಯ- ಶೈಲಜಾ ಗೋರನಮನೆ

300x250 AD

ಶಿರಸಿ: ಸ್ವಾಸ್ತ್ಯ ಹಾಗೂ ಸಂಸ್ಕಾರಯುತ ಸಮಾಜವನ್ನು ಕಟ್ಟುವ ಕಾರ್ಯ ಪ್ರಜ್ಞಾವಂತರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಿಗೆ ಸಾಮಾಜಿಕ ಪರಿಸರದಲ್ಲಿ ಹೆಚ್ಚು ಕಲಿಕೆ ಆಗುತ್ತದೆ. ಸಾಮಾಜಿಕ ಮತ್ತು ಸಂಸ್ಕಾರಯುತವಾದ ಬೆಳವಣಿಗೆ ಬೇಸಿಗೆ ಶಿಬಿರಗಳಂತ ಶಿಬಿರಗಳಲ್ಲಿ ಆಗುತ್ತದೆ. ಇಂಥ ಶಿಬಿರಗಳನ್ನು ಹೆಚ್ಚು ಹೆಚ್ಚು ಏರ್ಪಡಿಸುವ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಲು ಸಾಧ್ಯ. ಇಂಥ ಕೆಲಸವನ್ನು ಮಮತಾ ನಾಯ್ಕ ಕೆಲವು ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರ ಶ್ರಮಕ್ಕೆ ಯೋಗ್ಯ ಪ್ರತಿಫಲ ಸಿಕ್ಕಿದೆ ಎಂದು ಪತ್ರಕರ್ತೆ ಶೈಲಜಾ ಗೊರನಮನೆ ಅಭಿಪ್ರಾಯ ಪಟ್ಟರು.

ಅವರು ಇಲ್ಲಿನ ನಿತ್ಯಾನಂದ ಮಠದಲ್ಲಿ ನಡೆದ 8 ದಿನಗಳ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಯಾಗಿ ಮಾತನಾಡಿದ ಎಚ್, ಡಿ, ಎಫ್,ಸಿ ಲೈಪ್ ಇನ್ಸೂರೆನ್ಸ್ ಶಿರಸಿ ಶಾಖೆಯ ವ್ಯವಸ್ಥಾಪಕರಾದ ಪ್ರಸನ್ನ ಶೆಟ್ಟಿ ಶಿಕ್ಷಣ ಸಂಸ್ಥೆಗಳು ಕಲಿಸಲಾಗದ ಹಲವು ವಿಷಯಗಳನ್ನು ಈ ಶಿಬಿರಗಳಲ್ಲಿ ಮಕ್ಕಳು ಕಲಿಯುತ್ತಾರೆ. ನಿಜವಾಗಿಯೂ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಮಾದರಿಯಾಗಿದೆ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎನ್ ಎಸ್ ಪಾಲಿಟೆಕ್ನಿಕ್ ಕಾಲೇಜಿನ ಟೆಕ್ನಿಕಲ್ ವಿಭಾಗದ ಮುಖ್ಯಸ್ಥರಾದ ದಿನೇಶ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನಿತ್ಯಾನಂದ ಮಠದ ಕಾರ್ಯದರ್ಶಿಗಳಾದ ಲಿಂಗಪ್ಪ ಕೊಂಡ್ಲಿ, ಶಿಬಿರದ ಸಂಚಾಲಕಿ ಮಮತಾ ನಾಯ್ಕ ಉಪಸ್ಥಿತರಿದ್ದರು. ಶಿಬಿರದ ಮಕ್ಕಳು ಪ್ರಾರ್ಥನೆ ಮಾಡಿದರು. ಶಿಬಿರದ ಸುಜಾತಾ ನಾಯ್ಕ ಅತಿಥಿಗಳನ್ನು ಸ್ವಾಗತಿಸಿದರು. ಸಂಚಾಲಕಿ ಮಮತಾ ನಾಯ್ಕ ಒಂದು ವಾರದ ಶಿಬಿರದಲ್ಲಿ ನಡೆದ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.ನೇತ್ರಾವತಿ ಗುಡ್ಡದಮನೆ ಕಾರ್ಯಕ್ರಮ ನಿರೂಪಿಸಿದರು.ಶಿಬಿರದ ವ್ಯವಸ್ಥಾಪಕಿ ರೇಷ್ಮಾ ದೇಶಪಾಂಡೆ ಕೊನೆಯಲ್ಲಿ ವಂದಿಸಿದರು.ಶಿಬಿರದಲ್ಲಿ ಸುಧಾ ಮಕ್ಕಳ ವಿವಿಧ ಚಟುವಟಿಕೆಗಳ ಪ್ರಸ್ತುತಿಗೆ ಸಹಕರಿಸಿದರು. ಶಿಬಿರದಲ್ಲಿ ಕಲಿತ ವಿವಿಧ ಚಟುವಟಿಕೆಗಳನ್ನು ಮಕ್ಕಳು ಪ್ರಸ್ತುತ ಪಡಿಸುವ ಮೂಲಕ ರಂಜಿಸಿದರು. ಮಕ್ಕಳ ಪಾಲಕರು ಶಿಬಿರದ ಕುರಿತು ಅಭಿಪ್ರಾಯ ಹಂಚಿಕೊಂಡರು. ಕೊನೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಮಕ್ಕಳಿಗೆ ಪಾರಿತೋಷಕ ನೀಡಿ ಪ್ರಶಂಸಿಸಲಾಯಿತು.

Share This
300x250 AD
300x250 AD
300x250 AD
Back to top