eUK ವಿಶೇಷ: ವನವಾಸಿಗಳ (ಗಿರಿಜನರ) ಪವಿತ್ರ ಧ್ವಜ ಸ್ತಂಭವನ್ನು ಅರಣ್ಯ ರಕ್ಷಕ ಭಾಸ್ಕರ್ ಗೌಡ ಅಲಿಯಾಸ್ ಅಬ್ದುಲ್ ರೆಹಮಾನ್ ಧ್ವಂಸಗೊಳಿಸಿರುವ ಘಟನೆ ತೆಲಂಗಾಣದ ಏಜೆನ್ಸಿ ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ.
ಮಾರ್ಚ್ 30 ರಂದು, ಶ್ರೀ ರಾಮನವಮಿ ನಂತರ, ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಅಶ್ವರಾವ್ ಪೇಟೆ ಮಂಡಲದ ಗುಮ್ಮಡಿವಾಲಿ ಗ್ರಾಮದ ವನವಾಸಿಗಳು ತಮ್ಮ ಪ್ರಾಚೀನ ಸ್ಥಳೀಯ ಸಂಪ್ರದಾಯದಂತೆ ಗಂಗನಾಮ ದೇವಸ್ಥಾನದಲ್ಲಿ ಬೇವಿನ ಮರದ ಕಾಂಡದಿಂದ ಮಾಡಿದ ಹೊಸ ಧ್ವಜಸ್ತಂಭವನ್ನು ಇರಿಸಲು ಸಿದ್ಧತೆ ನಡೆಸಿದರು. ಈ ವನವಾಸಿಗಳು ಅರಣ್ಯ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದು ಸಮೀಪದ ಕಾಡಿನಿಂದ ಮರದ ಕಾಂಡವನ್ನು ತಂದರು. ದೇವಸ್ಥಾನದ ಮುಂದೆ ‘ಧ್ವಜಸ್ತಂಭ’ ನಿರ್ಮಿಸಲು ಸಿದ್ಧತೆ ನಡೆಸುತ್ತಿದ್ದಾಗ, ಅರಣ್ಯಾಧಿಕಾರಿ ಅಬ್ದುಲ್ ರೆಹಮಾನ್ ನೇತೃತ್ವದಲ್ಲಿ ಏಕಾಏಕಿ ದೇವಸ್ಥಾನಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಸ್ಥಳೀಯರ ಮನವಿಗೆ ಮಣಿಯದೆ ಪವಿತ್ರ ಧ್ವಜಸ್ತಂಭವನ್ನು ಕಡಿದು ತುಂಡರಿಸಿದ್ದಾರೆ.
ಧ್ವಜಸ್ತಂಭ ನಾಶವಾಗಿರುವ ಸುದ್ದಿ ಜಿಲ್ಲೆಯಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಆಕ್ರೋಶಗೊಂಡ ಸ್ಥಳೀಯ ಗ್ರಾಮಗಳ ಆದಿವಾಸಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ವಿಭಾಗೀಯ ಅರಣ್ಯ ಕಚೇರಿಗೆ ಧಾವಿಸಿ, ನ್ಯಾಯ ಮತ್ತು ತಮ್ಮ ಭಾವನೆಗಳಿಗೆ ಮತ್ತು ಸ್ಥಳೀಯ ಸಂಪ್ರದಾಯಗಳಿಗೆ ಧಕ್ಕೆ ತಂದಿರುವ ಅರಣ್ಯ ರಕ್ಷಕ ಅಬ್ದುಲ್ ರೆಹಮಾನ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು. ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೊಸ ಮರದ ಕಾಂಡವನ್ನು ವ್ಯವಸ್ಥೆಗೊಳಿಸುವುದಾಗಿ ಮತ್ತು ಅಬ್ದುಲ್ ರೆಹಮಾನ್ ಅವರಿಂದ ಕ್ಷಮೆಯಾಚಿಸುವ ಭರವಸೆಯೊಂದಿಗೆ ಕೋಪಗೊಂಡ ಆದಿವಾಸಿಗಳು ಸಮಾಧಾನಗೊಂಡರು.
ಅರಣ್ಯ ಸಂರಕ್ಷಣಾಧಿಕಾರಿ ಇತ್ತೀಚೆಗೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರು ಮತ್ತು ಅವರ ಕೃತ್ಯಕ್ಕೆ ‘ಧಾರ್ಮಿಕ ಕೋನ’ ಕಾರಣವೆಂದು ಸ್ಥಳೀಯರು ಹೇಳುತ್ತಾರೆ.
ಕೃಪೆ: http://nijamtoday.com