• Slide
    Slide
    Slide
    previous arrow
    next arrow
  • ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತುರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

    300x250 AD

    ಅಂಕೋಲಾ : ಅಂಕೋಲಾ ಕಾರವಾರ ಮಾರ್ಗ ಮಧ್ಯೆ ರಾ.ಹೆ 66ರ ಹಾರವಾಡ ಘಟ್ಟದ ಪ್ರದೇಶದಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ಸಂಭವಿಸಿದೆ. ಗೋವಾ ನೊಂದಣಿ ಸಂಖ್ಯೆ ಹೊಂದಿರುವ ಸ್ಕಾರ್ಪಿಯೊ ಕಾರಿನ ಯಾಂತ್ರಿಕ ದೋಷ ಇಲ್ಲವೇ, ಇತರೆ ಕಾರಣಗಳಿಂದ ಹೊತ್ತಿ ಉರಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಬೆಂಕಿ ಆಕಸ್ಮಿಕದ ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು.ಈ ವೇಳೆವಾಗಲೇ ವಾಹನ ಸುಟ್ಟು ಕರಕಲಾಗಿದೆ,ಕಾರಿನಲ್ಲಿದ್ದ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದು,ಆಸ್ಪತ್ರೆಗೆ ದಾಖಲಾಗಿದ್ದಾನೆ.

    300x250 AD

    ನಡುರಾತ್ರಿಯ ವೇಳೆ ಹೆದ್ದಾರಿ ಅಂಚಿನಲ್ಲಿ ನಡೆದ ಈ ಘಟನೆ ಚುನಾವಣಾ ಸಮಯವಾದ್ದರಿಂದ ಸ್ಥಳೀಯರಲ್ಲಿ ನಾನಾ ರೀತಿಯ ಚರ್ಚೆಗೆ ಕಾರಣವಾದಂತಿದ್ದು,ಘಟನೆಯ ಕುರಿತಂತೆ ಪೊಲೀಸ್ ತನಿಖೆಯಿಂದ ಹೆಚ್ಚಿನ ಹಾಗೂ ನಿಖರ ಮಾಹಿತಿ ತಿಳಿದು ಬರಬೇಕಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top