• Slide
    Slide
    Slide
    previous arrow
    next arrow
  • ಸಿಆರ್‌ಪಿಎಫ್, ಪೊಲೀಸರ ಪಥಸಂಚಲನ

    300x250 AD

    ಅಂಕೋಲಾ: ವಿಧಾನಸಭೆ ಚುನಾವಣೆಯ ಹಿನ್ನೆಲೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಮತ್ತು ಪೊಲೀಸರು ಶನಿವಾರ ಪಟ್ಟಣದಲ್ಲಿ ಸಶಸ್ತ್ರಧಾರಿಗಳಾಗಿ ಪಥಸಂಚಲನ ನಡೆಸಿದರು.

    ಪೊಲೀಸ್ ಠಾಣೆಯಿಂದ ಹೊರಟ ಪಥಸಂಚಲನ ಕಾರವಾರ ರಸ್ತೆ ಮೂಲಕ ಪಟ್ಟಣದ ಮುಖ್ಯ ರಸ್ತೆ ಬೆಂಡಿಬಜಾರ ಕಿತ್ತೂರು ಚೆನ್ನಮ್ಮ ರಸ್ತೆಯಿಂದ ಮರಳಿ ಪೊಲೀಸ ಠಾಣೆಗೆ ಆಗಮಿಸಿತು. ತಾಲೂಕಿನಲ್ಲಿ ಯಾವುದೆ ದೊಂಬಿ ಘಲಾಟೆಗಳಿಲ್ಲದೆ ಸುಗಮ ಮತ್ತು ಶಾಂತ ರೀತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯೋಧರನ್ನು ಕರೆಯಿಸಲಾಗಿದೆ.

    300x250 AD

    ಜಿಲ್ಲೆಯ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿಯೂ ಕಾರ್ಯನಿರ್ವಹಿಸಲಿದ್ದಾರೆ. ಠಾಣೆಯ ಸಿಪಿಐ ಜಾಕ್ಷನ್ ಡಿಸೋಜಾ, ಪಿಎಸ್‌ಐಗಳಾದ ಪ್ರೇಮನಗೌಡ ಪಾಟೀಲ, ಮಹಾಂತೇಶ ಬಿ.ವಿ. ಈ ವೇಳೆ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top