• Slide
    Slide
    Slide
    previous arrow
    next arrow
  • ಅಲಗೇರಿ ಗ್ಯಾಸ್ ಗೋಡೌನ್ ಬಳಿ ಬೆಂಕಿ; ಸಾರ್ವಜನಿಕರಲ್ಲಿ ಆತಂಕ

    300x250 AD

    ಅಂಕೋಲಾ: ಇಲ್ಲಿನ ಅಲಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಇಂಡೇನ್ ಗ್ಯಾಸ್ ಗೋಡೌನ್ ಬಳಿ ಬೆಂಕಿ ಕಾಣಿಸಿಕೊಂಡು ಹತ್ತಿರದ ನಿವಾಸಿಗಳು ಕೆಲಕಾಲ ಆತಂಕಗೊಳ್ಳುವoತೆ ಮಾಡಿದೆ.

    ಗೋಡೌನ್ ಹೊರ ಆವರಣದಲ್ಲಿ ಬಂಜರು ಭೂಮಿ ಇದ್ದು ಅಲ್ಲಿರುವ ಒಣ ಕಟ್ಟಿಗೆ ಮತ್ತು ಗಿಡಗಂಟಿಗಳಿಗೆ ಯಾವುದೋ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ. ಒಣಹವೆ ಮತ್ತು ಗಾಳಿಯಿಂದ ಬೆಂಕಿಯ ಜ್ವಾಲೆ ಗ್ಯಾಸ್ ಗೋಡೌನ್ ಬಳಿಯೂ ಹಬ್ಬಿದೆ. ಅದೃಷ್ಟವಶಾತ್ ಹಗಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿoದ ಅಲ್ಲಿನ ಸಾರ್ವಜನಿಕರು ಹರಸಾಹಸಪಟ್ಟು ಬೆಂಕಿ ಆರಿಸಿ ಇನ್ನಷ್ಟು ಹರಡುವದನ್ನು ತಪ್ಪಿಸಿದ್ದಾರೆ.

    ಇಂದಿನ ಬೆಂಕಿ ಅನಾಹುತದಿಂದ ಇಲ್ಲಿನ ನಿವಾಸಿಗಳು ತೀವ್ರ ಆತಂಕಗೊ0ಡಿದ್ದಾರೆ. ಬರ್ಗಿಯಲ್ಲಿ ನಡೆದ ಗ್ಯಾಸ್ ದುರಂತದ ಕರಾಳ ದಿನ ಇನ್ನೂ ಜನರ ಮನಸ್ಸಿನಲ್ಲಿ ಹಾಗೆಯೇ ಇರುವಾಗ ಅಲಗೇರಿಯ ಅಗ್ನಿ ಅವಘಡ ಜನರ ನಿದ್ದೆಗೆಡಿಸಲಿದೆ. ಜನವಸತಿ ಪ್ರದೇಶದಲ್ಲಿ ಗ್ಯಾಸ್ ಗೋಡೌನ್ ಬೇಡವೆಂದು ಇಲ್ಲಿನ ನಿವಾಸಿಗಳು ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ ಇಲ್ಲಿನ ಗ್ರಾ.ಪಂ. ಆಗಲಿ ಗ್ಯಾಸ್ ವಿತರಕರಾಗಲೀ ತಲೆಕೆಡಿಸಿಕೊಂಡಿಲ್ಲ.

    300x250 AD

    ಪ್ರತಿದಿನ ಆತಂಕದಲ್ಲೇ ದಿನಕಳೆಯುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಜನ, ಅಲ್ಲದೆ ಅನಲೋಡಿಂಗ್ ಮಾಡುವಾಗ ವಾಹನದ ಮೇಲಿಂದ ಸಿಲಿಂಡರಗಳನ್ನು ಬಿಸಾಡುತ್ತಾರೆ ಇದೂ ಕೂಡ ಜನರಲ್ಲಿ ಆತಂಕ ಮತ್ತು ಕಿರಿಕಿರಿ ಉಂಟುಮಾಡುತ್ತಿದೆ ಎನ್ನುತ್ತಾರೆ. ಸ್ಥಳಕ್ಕೆ ಪಿಎಸ್‌ಐ ಕಾಂಬಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಎಚ್ಚೆತ್ತುಕೊಂಡ ಅಲಗೇರಿಯ ನಿವಾಸಿಗಳು ಗ್ಯಾಸ್ ಗೋಡೌನ್ ಸ್ಥಳಾಂತರಿಸುವ0ತೆ ಮನವಿ ಸಲ್ಲಿಸಲಿದ್ದಾರೆ. ಮನವಿಗೆ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವದಾಗಿಯೂ ಎಚ್ಚರಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top