Slide
Slide
Slide
previous arrow
next arrow

ಏ.11ಕ್ಕೆ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಮಹೋತ್ಸವ

300x250 AD

ಹೊನ್ನಾವರ: ಪಟ್ಟಣದ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ ಏ.11ರಂದು ಮಂಜಾನೆ 11.50 ಗಂಟೆಗೆ ಪಟ್ಟಣದ ದುರ್ಗಾಕೇರಿಯ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಜು ನಾಯ್ಕ ಮಂಕಿ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಮಾಹಿತಿ ನೀಡಿ, ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. 1998ರಲ್ಲಿ ಕೇವಲ 35 ಸಾವಿರ ರೂ.ಬಂಡವಾಳದಲ್ಲಿ ಸಂಘವನ್ನು ಸ್ಥಾಪಿತವಾಗಿ ಪ್ರಸುತ್ತ 15 ಕೋಟಿಗಳಷ್ಟು ಬಂಡವಾಳ ಹೊಂದಿದೆ. 11 ಕೋಟಿ ರೂ.ಗಳಷ್ಟು ಠೇವಣಿ ಇದೆ, 10-15 ಕೋಟಿ ರೂ. ಸಾಲ ನೀಡಿದ್ದು ವಸೂಲಾತಿ ಶೇಕಡಾ 95ರಷ್ಟಿದೆ ಎಂದು ತಿಳಿಸಿದರು. ಏಳುವರೆ ವರ್ಷಗಳಲ್ಲಿ ದ್ವಿಗುಣವಾಗುವ ಠೇವಣಿ ಯೋಜನೆಯನ್ನು ಹಿರಿಯರಿಗಾಗಿ ಬೆಳ್ಳಿ ಹಬ್ಬದ ಈ ಸಂದರ್ಭದಲ್ಲಿ ತರಲಿದ್ದೇವೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ರಾಜೇಶ ಸಾಳೇಹಿತ್ತಲ ಮಾತನಾಡಿ, ಬೆಳಿಗ್ಗೆ 11.30 ಗಂಟೆಗೆ ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಗಮಿಸುವರು. ಸಭಾ ಕಾರ್ಯಕ್ರಮದ ಮೊದಲು ಹೋಮ ಹವನ ನೆರವೇರಲಿದೆ. ಸಭಾ ಕಾಯಕ್ರಮದ ನಂತರ ಮಕ್ಕಲಲಗೆ ಛದ್ಮವೇಶ ಸುಪ್ರಸನ್ನ ಮಹಾಗಣಪತಿ ಯಕ್ಷಗಾನ ಮಂಡಳಿ ಜಡ್ಡಿಕೇರಿ ಇವರಿಂದ ಶರಸೇತುಬಂಧ ಯಕ್ಷಗಾನ, ಮಂಗಳೂರಿನ ಸಂಜನಾ ಅಕಾಡೆಮಿ ಇವರಿಂದ ರಸಮಂಜರಿ, ಯೋಗ ಪ್ರದರ್ಶನ ನಡೆಯಲಿವೆ. ಸಂಘದ ಸಂಸ್ಥಾಪನಾ ಸಂದರ್ಭದ ನಿರ್ದೇಶಕರನ್ನು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

300x250 AD

ಸಭಾ ಕಾರ್ಯಕ್ರಮದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಸಂಘದ ಅಧ್ಯಕ್ಷ ರಾಜು ಎಂ. ನಾಯ್ಕ ಅಧ್ಯಕ್ಷತೆ ವಹಿಸುವರು. ಸಹಕಾರ ಸಂಘಗಳ ಉಪ ನಿಬಂಧಕ ಮಂಜುನಾಥ ಆರ್., ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ, ಸ್ವರ್ಣವಲ್ಲೀ ರಾಮಕ್ಷತ್ರಿಯ ಪರಿಷತ್ ಅಧ್ಯಕ್ಷ ಎಸ್.ಕೆ.ನಾಯ್ಕ, ಕುಂದಾಪುರದ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ನಾಗರಾಜ, ಕುಮಟಾದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ ಕಲ್ಮನೆ, ನ್ಯಾಯವಾದಿ ರಾಮದಾಸ ನಾಯ್ಕ, ನ್ಯಾಯವಾದಿ ಕೆ.ವಿ. ನಾಯ್ಕ, ಶ್ರೀ ಲಕ್ಷ್ಮೀನಾರಾಯಣ ದೇವ ಹಾಗೂ ಸಮಾಜ ಅಧ್ಯಕ್ಷ ಮೋಹನ ಸಾಳೇಹಿತ್ತಲ, ಶರಾವತಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಜೇಶ ಸಾಳೇಹಿತ್ತಲ, ಮುಖ್ಯ ಕಾರ್ಯನಿರ್ವಾಹಕ ಯೋಗೀಶ ನಾಯ್ಕ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪತ್ರಿಕಾಗೊಷ್ಟಿಯಲ್ಲಿ ನಿರ್ದೇಶಕರಾದ ಕೃಷ್ಣ ನಾಯ್ಕ, ಉಲ್ಲಾಸ ನಾಯ್ಕ, ಪರಮೇಶ್ವರ ನಾಯ್ಕ, ಬಾಳಾ ನಾಯ್ಕ, ಸುಧಾಕರ ನಾಯ್ಕ, ಮೋಹನ ನಾಯ್ಕ, ಸುಚಿತ್ರಾ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಯೋಗೀಶ ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top