ಶಿರಸಿ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಡನಕೇರಿ, ಸುಗಾವಿ ಮತ್ತು ನೆಹರೂ ಪ್ರೌಢಶಾಲೆ ಓಣೀಕೇರಿ ಮಕ್ಕಳ ಬೇಸಿಗೆ ಶಿಬಿರಕ್ಕೆ ಮಾಡನಕೇರಿ ಶಾಲೆಯಲ್ಲಿ ಬಿಸಿಲ ಬೇಗೆಗೆ ಬಸವಳಿವ ಪಕ್ಷಿಗಳಿಗೆ ನೀರಿಡುವ ಮೂಲಕ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಚಾಲನೆ ನೀಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕಾ ಕಾರ್ಯದರ್ಶಿ ಎನ್. ಎಸ್. ಭಾಗ್ವತ್ ಕಸಿ ಕಟ್ಟುವಿಕೆ , ASOC ವೀರೇಶ್ ಮಾದರ್ ಪ್ರಥಮ ಚಿಕಿತ್ಸೆ, , ಸ್ಕೌಟ್ ಮಾಸ್ಟರ್ ಶ್ರೀ ಕಮಲಾಕರ ಪಟಗಾರ Knots and Lashing ಹಾಗೂ ಲೇಡಿ ಸ್ಕೌಟ್ ಮಾಸ್ಟರ್ ಶ್ರೀಮತಿ ಮಮತಾ ಆರ್. ಅಂದಾಜಿಸುವಿಕೆ ಬಗ್ಗೆ ತರಬೇತಿ ನೀಡಿದರು.
ಮಧ್ಯಾಹ್ನದ ವಿರಾಮದಲ್ಲಿ ಬಲೂನಿನ ಮೇಲೆ ಚಿತ್ರ ಬಿಡಿಸುವ ಚಟುವಟಿಕೆ ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾಯಿತು. ಸುರೇಶ್ ಪಟಗಾರ ಇವರ ಅಭಿನಯ ಗೀತೆ, ಶ್ರೀಮತಿ ಮಮತಾ ಆರ್. ಇವರಿಂದ ವಿವಿಧ ಮನರಂಜನಾ ಆಟಗಳು ಮಕ್ಕಳನ್ನು ರಂಜಿಸಿತು. ಸ್ಕೌಟ್ಸ್ ಸಂಸ್ಥೆಯ ತಾಲೂಕಾ ಕಾರ್ಯಾಧ್ಯಕ್ಷ ಸುರೇಶ ಪಟಗಾರ , ಸುಗಾವಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಂಕರ್ ಎನ್. ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ಸುಧಾ ಪಟಗಾರ ಹಾಗೂ ಸ್ಕೌಟ್ ಮಾಸ್ಟರ್ ಬಿ.ಬಿ.ಮಾಲೀಪಾಟೀಲ್ ಉಪಸ್ಥಿತರಿದ್ದರು.