Slide
Slide
Slide
previous arrow
next arrow

ಕಿರವತ್ತಿ ಸಂತ್ ಜೋಸೆಫ್ ಚರ್ಚ್ನಲ್ಲಿ ‘ಗುಡ್ ಫ್ರೈಡೇʼ ಆಚರಣೆ

300x250 AD

ಯಲ್ಲಾಪುರ: ತಾಲೂಕಿನ ಕಿರವತ್ತಿಯ ಸಂತ್ ಜೋಸೆಫ್‌ರ ದೇವಾಲಯದಲ್ಲಿ ಫಾದರ್ ಸ್ಟಾನ್ಲಿ ಕ್ರಾಸ್ಟಾ ಮಾರ್ಗದರ್ಶನದಲ್ಲಿ ಶುಕ್ರವಾರದಂದು ʼಗುಡ್‌ಫ್ರೈಡೇʼ ಆಚರಿಸಲಾಯಿತು.
ಈ ವೇಳೆ ಪ್ರವಚನ ನೀಡಿದ ಫಾದರ್ ಸ್ಟಾನ್ಲಿ ಕ್ರಾಸ್ಟಾ, ಹುಟ್ಟಿನಿಂದ ನಾವಿಡುವ ಪ್ರತಿ ಹೆಜ್ಜೆಯನ್ನೂ ಸಾವಿನೆಡೆಗೆ ಇಡುತ್ತೇವೆ. ಹಾಗೆಯೇ ಪಾಪಿಗಳ ರಕ್ಷಣೆಗೆ ಮಾನವ ರೂಪ ತಾಳಿ ದನದ ಕೊಟ್ಟಿಗೆಯಲ್ಲಿ ಹುಟ್ಟಿದಾಗಿನಿಂದ ಪ್ರಭು ಯೇಸು ಇಟ್ಟ ಪ್ರತಿಯೊಂದು ಹೆಜ್ಜೆಯೂ ಕಲ್ವಾರಿ ಬೆಟ್ಟದ ತುದಿಯೆಡೆಗೆ ಸಾಗುತ್ತಿತ್ತು. ಆ ಕಲ್ವಾರಿ ಬೆಟ್ಟಕ್ಕೆ ಪಿಲಾತನ ಅರಮನೆಯಿಂದ ನಿರಪರಾಧಿಯಾಗಿದ್ದರೂ ಕೂಡ ಸುಳ್ಳು ಅಪಾದನೆಗಳಿಗೆ ಒಳಗಾಗಿ ಯೇಸು ಮರಣ ದಂಡನೆಗೆ ಒಳಗಾದರು. ಶಿಲುಬೆಯನ್ನು ತಾವೇ ಹೊತ್ತು ಕಲ್ವಾರಿಬೆಟ್ಟದ ಕಡೆಗೆ ಪ್ರಭು ಯೇಸು ಮಾಡಿದ ಆ ಅಂತಿಮ ಯಾತ್ರೆಯೇ ನಾವು ಇಂದು ಮಾಡುವ ಶಿಲಬೆಗೆ ಭಕ್ತಿಯಾಗಿದೆ. ಆ ಕಲ್ವಾರಿ ಬೆಟ್ಟದಲ್ಲಿ ಅವರನ್ನು ಮೂರು ಮೊಳೆಗಳನ್ನು ಹೊಡೆದು ಶಿಲುಬೆಯಲ್ಲಿ ನಿಲ್ಲಿಸಲಾಯಿತು. ಈ ಮರಣದಿಂದ ಮನುಕುಲವನ್ನು ಸೈತಾನನ ಮುಷ್ಟಿಯಿಂದ ಬಿಡುಗಡೆಗೊಳಿಸಿದರು ಎಂದು ಹೇಳಿದರು.

ಕಿರವತ್ತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ರೈಸ್ತ ಧರ್ಮದ ಭಜನೆಗಳನ್ನು ಹಾಡುವ ಮೂಲಕ ಶಿಲುಬೆಯ ಮೆರವಣಿಗೆ ಮಾಡಲಾಯಿತು. ಗುಡ್ ಫ್ರೈಡೇ ಕ್ರಿಶ್ಚಿಯನ್ ಸಮುದಾಯದವರ ಬಹಳ ಮಹತ್ವದ ದಿನ. ತಾಲೂಕಿನಾಧ್ಯಂತ ಕ್ರಿಶ್ಚಿಯನ್ನರು ಗುಡ್ ಫ್ರೈಡೇಯನ್ನು ಆಚರಿಸುತ್ತಾರೆ. ಚರ್ಚ್ಗೆ ಭೇಟಿ ನೀಡುವ ಮೂಲಕ ಶುಭ ಶುಕ್ರವಾರದ ಆಚರಣೆಯಲ್ಲಿ ತೊಡಗುವುದು ವಿಶೇಷ. ಪ್ರತಿವರ್ಷ ಈಸ್ಟರ್‌ಗೂ ಮೊದಲ ಶುಕ್ರವಾರವನ್ನು ‘ಗುಡ್ ಫ್ರೈಡೇʼ ಎಂದು ಆಚರಿಸಲಾಗುತ್ತದೆ. ಈ ದಿನದಂದು ಏಸುಕ್ರಿಸ್ತನು ತನ್ನ ಮರಣದ ನಂತರ ಪುನಃ ಮರುಜೀವ ಪಡೆದ ದಿನ ಎಂದು ನಂಬಲಾಗಿದೆ. ಹಾಗಾಗಿ ಇದನ್ನು ಶುಭ ಶುಕ್ರವಾರ ಎಂದೂ ಹೇಳಲಾಗುತ್ತದೆ.

300x250 AD

ಗುಡ್‌ಫ್ರೈಡೇ ಏಸುವು ತನ್ನನ್ನು ನಂಬಿದವರ ಪಾಪ ವಿಮೋಚನೆಗೊಳಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ಪವಿತ್ರ ದಿನವಾಗಿದೆ ಎಂದು ಕ್ರೈಸ್ತರ ನಂಬಿಕೆಯಾಗಿದೆ. ಈಸ್ಟರ್ ಮೊದಲು ಕ್ರೈಸ್ತ ಧರ್ಮಿಯರು 40 ದಿನ ಉಪವಾಸ ಆಚರಿಸುತ್ತಾರೆ. ಅದರಲ್ಲಿ 40 ದಿದೊಳಗೆ ಬರುವ ಶುಕ್ರವಾರದಂದು ಖಡ್ಡಾಯವಾಗಿ ಉಪವಾಸ ಆಚರಿಸಲಾಗುತ್ತದೆ.ಈ ಉಪವಾಸದಲ್ಲಿ ಉಳಿತಾಯ ಮಾಡಿದ ದವಸ, ಧಾನ್ಯ, ಹಣವನ್ನು ಬಡವರಿಗೆ ದಾನಮಾಡಲಾಗುತ್ತದೆ. ತಾಲೂಕಿನ ವಿವಿಧ ಚರ್ಚ್ ಗಳಲ್ಲಿ ಪ್ರತಿವರ್ಷ ಈಸ್ಟರ್‌ಗೂ ಹಿಂದಿನ ಶುಕ್ರವಾರದಂದು ಕ್ರೈಸ್ತ ಸಮುದಾಯದವರು ʼಗುಡ್‌ಫ್ರೈಡೇʼ ಆಚರಿಸಲಾಗುತ್ತಾರೆ.

Share This
300x250 AD
300x250 AD
300x250 AD
Back to top