• Slide
  Slide
  Slide
  previous arrow
  next arrow
 • ಯುವ ಕಾಂಗ್ರೆಸ್ ಅಧ್ಯಕ್ಷನ ಅಮಾನತು; ಮುಂದುವರಿದ ಕೈ ಕಾರ್ಯಕರ್ತರ ಆಕ್ರೋಶ

  300x250 AD

  ಹೊನ್ನಾವರ: ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂದೇಶ ಶೆಟ್ಟಿ ತಾತ್ಕಾಲಿಕ ಅಮಾನತು ಖಂಡಿಸಿ ಎರಡನೇ ದಿನವೂ ಕಾಂಗ್ರೆಸ್ ಯುವ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ.
  ಸಾಲ್ಕೋಡ್, ಹೊಸಾಕುಳಿ ಗ್ರಾಮದ ನೂರಾರು ಸಂಖ್ಯೆಯ ಯುವಕರು ಪಟ್ಟಣದಲ್ಲಿ ದಿಢೀರ್ ಜಮಾಯಿಸಿ ಆದೇಶ ವಾಪಸ್ಸು ಪಡೆಯುವಂತೆ ಒತ್ತಾಯಿಸಿದರು. ಒಂದುವೇಳೆ ಆದೇಶ ವಾಪಸ್ಸು ಪಡೆಯದೇ ಹೋದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಲಯ, ಜಿಲ್ಲಾ ಕಾಂಗ್ರೆಸ್ ಕಾರ್ಯಲಯ, ಜಿಲ್ಲೆಯ ಪ್ರಮುಖ ನಾಯಕರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಖಡಕ್ ಎಚ್ಚರಿಕೆಯನ್ನು ಕಾರ್ಯಕರ್ತರು ನೀಡಿದರು. ಜಿಲ್ಲೆಗೆ ಪಕ್ಷದ ಯಾವುದೇ ನಾಯಕರು ಆಗಮಿಸಿದಾಗ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
  ಈ ಸಮಯದಲ್ಲಿ ಸಂದೇಶ ಶೆಟ್ಟಿ ಮಾತನಾಡಿ, ಪಕ್ಷ ಕಟ್ಟಿ ಬೆಳೆಸಿರುವ ಆತ್ಮತೃಪ್ತಿ ಇದೆ. ಈ ಬಾರಿ ಶತಾಯಗತಾಯ ಪ್ರಯತ್ನಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಲು ಸಜ್ಜಾಗಿದ್ದೆ. ಪಕ್ಷದ ಹಲವರ ಅಭಿಪ್ರಾಯದಂತೆ ಅವರ ಧ್ವನಿಯಾಗಿ ಹೊರಗಿನವರಿಗೆ ಈ ಬಾರಿ ಟಿಕೇಟ್ ನೀಡದೇ ಸ್ಥಳಿಯವಾಗಿ ಅರ್ಜಿ ಹಾಕಿರುವ ಯಾರಿಗೆ ಟಿಕೇಟ್ ನೀಡಿದರೂ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈಗಾಗಲೇ ನೂರರು ಕಾರ್ಯಕರ್ತರು ಕರೆ ಮಾಡಿ ಬೆಂಬಲ ಸೂಚಿಸಿದರೂ ಯಾವುದೇ ದುಡಿಕಿನ ನಿರ್ಧಾರ ಕೈಗೊಳ್ಳದೇ ತಾಳ್ಮೆಯಿಂದ ಸಹಕರಿಸಿ ಎಂದು ಹೇಳಿದರೂ, ಕಾರ್ಯಕರ್ತರ ಆಕ್ರೋಶ ಕಡಿಮೆಯಾಗಲಿಲ್ಲ ಎಂದಿದ್ದಾರೆ.
  ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ಜಿಲ್ಲಾಧ್ಯಕ್ಷ ಅಕ್ಷಯ ನಾಯ್ಕ, ಪತ್ರಿಕಾಗೋಷ್ಠಿಯಲ್ಲಿ ನನ್ನ ಸಮ್ಮುಖದಲ್ಲಿ ಸಂದೇಶ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರೂ ಪಕ್ಷದ ಒಳಿತಾಗಿ ಅವರು ಕಾರ್ಯಕರ್ತರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಕಾರ್ಯಕರ್ತರು ಸಮಧಾನದಿಂದಿರಬೇಕು ಎನ್ನುತ್ತಿದ್ದಂತೆ ಆದೇಶ ವಾಪಸ್ಸು ಪಡೆಯಲು ಪಟ್ಟು ಹಿಡಿದರು. ಸ್ಥಳದಿಂದಲೇ ಯುವ ಘಟಕದ ರಾಜ್ಯಾಧ್ಯಕ್ಷರಾದ ಮಹಮ್ಮದ್ ನಲಾಪಡ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದಾಗ ದೆಹಲಿ ಪ್ರವಾಸದಲ್ಲಿದ್ದು, ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಆಗಮಿಸಿದಾಗ ತಕ್ಷಣ ಆದೇಶ ಹಿಂಪಡೆಯುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
  ಈ ವೇಳೆ ಎರಡು ದಿನ ಕಾದುನೋಡಿ ಆದೇಶ ವಾಪಸ್ಸಾಗದೇ ಹೋದಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಕಾರ್ಯಕರ್ತರು ಎಚ್ಚರಿಕೆಯನ್ನು ನೀಡಿದ್ದಾರೆ

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top