• Slide
    Slide
    Slide
    previous arrow
    next arrow
  • ಧಕ್ಕೆಯ ಹೂಳಿನಲ್ಲಿ ಬೆಳೆದ ಗಿಡಗಂಟಿಗಳು; ನಿರ್ವಹಣೆಯಿಲ್ಲದಾದ ಟೊಂಕಾ ಬಂದರು

    300x250 AD

    ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರಿಗೆ ಉಪಯೋಗವಾಗುವಂತೆ ಧಕ್ಕೆಯ ಮೇಲೆ ಕಳೆದ 5- 6 ವರ್ಷದಿಂದ ಅಲ್ಲಲ್ಲಿ ಹೂಳನ್ನು ರಾಶಿ ಹಾಕಿದ್ದು, ಗಿಡ- ಮರಗಳು ಬೆಳೆದು ಕಾಡಿನಂತಾಗಿದೆ. ಸರಿಯಾದ ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.
    ಮೀನುಗಾರಿಕಾ ಬಂದರಿನಲ್ಲಿ ಕಳೆದ 5- 6 ವರ್ಷದ ಹಿಂದೆ ಹೊಸದಾಗಿ ನಿರ್ಮಿಸಿದ ಜೆಟ್ಟಿ ಹಾಗೂ ಶರಾವತಿ ನದಿಯಲ್ಲಿ ಕೆಂಪು ಮಣ್ಣಿನಿಂದ ತುಂಬಿ ಹೊಸದಾಗಿ ನಿರ್ಮಿಸಿದಂತಹ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಮಾಡಿ ಅಲ್ಲಿ ತೆಗೆದ ಹೂಳನ್ನು ಮೀನುಗಾರರಿಗೆ ಉಪಯೋಗವಾಗುವಂತ ಧಕ್ಕೆಯ ಮೇಲೆ ರಾಶಿ ಹಾಕಿದ್ದು, ಅದರ ಮೇಲೆ ದೊಡ್ಡ ದೊಡ್ಡ ಗಿಡ- ಮರಗಳು ಹಿಂಡು ಹಿಂಡಾಗಿ ಬೆಳೆದು, ಕಾಡುಗಳಂತೆ ಕಾಣಿಸುತ್ತಿದೆ. ಸುತ್ತಲೂ ಹಿಂಡು ಹಿಂಡಾಗಿ ಬೆಳೆದು ನಿಂತ ಮರಗಳು ಇಡೀ ಪ್ರದೇಶದಲ್ಲಿ ಜನರು ಸಂಚರಿಸಲು ಭಯ ಪಡುವಂತಾಗಿದೆ.
    ಸ್ಥಳೀಯರು ಇಲ್ಲಿನ ಮೀನುಗಾರಿಕಾ ಇಲಾಖೆಯ ಅಧಿಕಾರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಜನವಸತಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೆ ಮೀನುಗಾರ ಮಹಿಳೆಯರು, ಸಾರ್ವಜನಿಕರು ಪ್ರತಿ ದಿನ ಓಡಾಡುತ್ತಾರೆ. ಗಿಡ ಗಂಟಿ ಬೆಳೆದು ಕತ್ತಲು ಆವರಿಸಿ ಹಾವು ಇತರೆ ಪ್ರಾಣಿಗಳಿಗೆ ವಾಸ್ತವ್ಯ ಮಾಡಲು ಅನುಕೂಲ ಮಾಡಿಕೊಟ್ಟಂತಿದೆ. ಯಾವುದಾದರು ಆಗಂತುಕರು ಅಡಗಿ ಕುಳಿತು ಅಪರಾಧ ಕೃತ್ಯಗಳ ಮಾಡುವ ಆತಂಕ ಸ್ಥಳೀಯ ಜನರನ್ನು ಕಾಡುತ್ತಿದೆ. ಈ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಭಯದ ವಾತಾವರಣ ಉಂಟಾಗುತ್ತಿದೆ.
    ಇಷ್ಟೆಲ್ಲ ಅವ್ಯವಸ್ಥೆಯ ಆಗರವಾಗಿದ್ದರೂ ಸರಿಯಾದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ರಾತ್ರಿ ಸಮಯದಲ್ಲಿ ಇಲ್ಲಿ ಕಳ್ಳತನವಾಗುತ್ತಿದ್ದು, ಕಳ್ಳತನವಾದ ವಸ್ತು ಹಾಗೂ ವ್ಯಕ್ತಿಯನ್ನು ಹುಡುಕುವುದು ಕೂಡ ಕಷ್ಟವಾಗಿದೆ. ಇದೇ ಸ್ಥಳದಲ್ಲಿರುವ ಪಾಳು ಬಿದ್ದಿರುವ ಮೀನುಗಾರಿಕೆ ಶೆಡ್ಡು ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗಿರುವ ಸ್ಥಳದಲ್ಲಿ ಲೈಟ್ ವ್ಯವಸ್ಥೆ ಇಲ್ಲದಿರುವದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಬಂದರು ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯ ಕುರಿತು ಸ್ಥಳೀಯ ಮೀನುಗಾರಿಕೆಯ ಅಧಿಕಾರಿಗಳಲ್ಲಿ ಕಾಸರಕೋಡ ಟೊಂಕಾ ಬಂದರಿನ ಸ್ಥಳೀಯ ಮೀನುಗಾರ ಸಂಘಟನೆ ಸಭೆ ನಡೆಸಿ ಸರಿಪಡಿಸುವ ವಿನಂತಿ ಮಾಡಿದರು ಕೇವಲ ಆಶ್ವಾಸನೆ ಕೊಟ್ಟಿದ್ದು ಬಿಟ್ಟರೆ ಇನ್ನೂ ತನಕ ಸಮಸ್ಯೆ ಬಗೆಹರಿಸಲಿಲ್ಲ. ಇನ್ನುಮುಂದೆಯಾದರೂ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top