ಭಾರತೀಯ ನೌಕಾಸೇನೆಯಿಂದ ಪಾಕಿಸ್ತಾನದ ಮೇಲೆ ತೀವ್ರ ದಾಳಿ:
ಭಾರತದ ದಾಳಿಗೆ ಪಾಕಿಗಳು ಕಂಗಾಲು
ನವದೆಹಲಿ: ಭಾರತ, ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ತೀವ್ರಗೊಂಡಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್, ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ಹಲವಾರು ನಗರಗಳು ಭಾರತ ನಡೆಸಿದ ಭಾರೀ ದಾಳಿಯಿಂದ ಹಾನಿಗೊಂಡಿವೆ.
INS ವಿಕ್ರಾಂತ್‌ನ ನೇತೃತ್ವದಲ್ಲಿ ಕರಾಚಿ ಬಂದರಿನಲ್ಲಿ ಭಾರತೀಯ ನೌಕಾಪಡೆಯು ದಾಳಿಯನ್ನು ನಡೆಸಿದ್ದು, ಕರಾಚಿ ಬಂದರು ಸಂಪೂರ್ಣ ನಾಶವಾಗಿದೆಯೆಂದು ತಿಳಿದುಬಂದಿದೆ.
ಪಾಕಿಸ್ತಾನವು ಜಮ್ಮು, ಪಠಾಣ್‌ಕೋಟ್ ಮತ್ತು ಉದಂಪುರ್‌ನಲ್ಲಿನ ಭಾರತೀಯ ಸೈನಿಕ ತಾಣಗಳ ಮೇಲೆ ಡೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ವಿಫಲ ಪ್ರಯತ್ನ ಮಾಡಿತ್ತು. ಇದಕ್ಕೆ ಪ್ರತಿದಾಳಿಯನ್ನು ಭಾರತ ನಡೆಸಿದ್ದು, ಪಾಕಿಸ್ತಾನದ ಹಲವು ಪ್ರಮುಖ ನಗರಗಳು ಗಂಭೀರವಾಗಿ ಹಾನಿಗೊಂಡಿವೆ.ಭಾರತೀಯ ಸೇನೆ ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಧ್ವಂಸಮಾಡಿದೆ. “ಪಾಕಿಸ್ತಾನದ ಪ್ರತಿಯೊಂದು ಪ್ರಯತ್ನವನ್ನೂ ತಡೆದಿದ್ದೇವೆ. ಭಾರತದ ಪ್ರಭುತ್ವ ಮತ್ತು ಪ್ರಜೆಗಳ ಭದ್ರತೆಯಿಗಾಗಿ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ,” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.