ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳಾದ ಚಾಣಕ್ಯ ಸಿ.ಆರ್. ಮತ್ತು ಶ್ರೀಧರ ಹೆಗಡೆ 2023ನೇ ಸಾಲಿನ ಅಖಿಲ ಭಾರತ ಮಟ್ಟದ ಗ್ರಾಜ್ಯುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿAಗ್ (ಗೇಟ್)ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಾರೆ.
ಫೆಬ್ರುವರಿ ತಿಂಗಳಿನಲ್ಲಿ ನಡೆದ ಗೇಟ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ಸಿವಿಲ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿಯಾದ ಚಾಣಕ್ಯ ಅಖಿಲ ಭಾರತ ಮಟ್ಟದಲ್ಲಿ 3606 ಶ್ರೇಯಾಂಕ ಪಡೆದುಕೊಂಡಿದ್ದಾನೆ. ಈತ ರಾಜು ಎಸ್.ಜಿ., ಸರೋಜಾ ದಂಪತಿಯ ಪುತ್ರನಾದ ಚಾಣಕ್ಯ ಮೂಲತಃ ಧಾರವಾಡದವನಾಗಿದ್ದಾನೆ.
ಕಂಪ್ಯೂಟರ್ ಸೈನ್ಸ್ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಯಾದ ಶ್ರೀಧರ ಹೆಗಡೆ ಅಖಿಲ ಭಾರತ ಮಟ್ಟದಲ್ಲಿ 9868 ಶ್ರೇಯಾಂಕ ಗಳಿಸಿದ್ದಾನೆ. ರಾಮಚಂದ್ರ ಹೆಗಡೆ ಮತ್ತು ಗಣಪಿ ಯಾಜಿ ಸುಪುತ್ರನಾದ ಈತ ತಾಲೂಕು ಮೂಲದವನು.
ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿರುವುದು ಸಂತಸ ತಂದಿದೆ ಎಂದು ಆಡಳಿತ ಮಂಡಳಿಯ ಮುಖ್ಯಸ್ಥ ವಿನಾಯಕ ಲೋಕುರ್ ಹೇಳಿದ್ದಾರೆ. ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಹರ್ಷ ಜಾಧವ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಪೂರ್ಣಿಮಾ ರಾಯ್ಕರ್ ಹಾಗೂ ಮಹಾವಿದ್ಯಾಲಯದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.