• Slide
  Slide
  Slide
  previous arrow
  next arrow
 • ರವೀಂದ್ರ ನಾಯ್ಕಗೆ ರಾಜಕೀಯ ಶಕ್ತಿ ನೀಡಲು ಅರಣ್ಯವಾಸಿಗಳಿಂದ ಪ್ರಾರ್ಥನೆ: ವಿಶೇಷ ಪೂಜೆ

  300x250 AD

  ಸಿದ್ದಾಪುರ: ಅರಣ್ಯವಾಸಿಗಳ ಜ್ವಲಂತ ಸಮಸ್ಯೆಗಳಾದ ಅರಣ್ಯ ಭೂಮಿ ಹಕ್ಕಿಗೆ ಹೋರಾಡುತ್ತಿರುವ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಒದಗಿ ಬರುವಂತೆ ತಾಲೂಕಿನ ಹೋರಾಟಗಾರರ ಪ್ರಮುಖರು ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ವರದಿಯಾಗಿದೆ.

  ತಾಲೂಕಿನ ಪ್ರತಿಷ್ಟಿತ ಗಂಗಾಂಬಿಕಾ ದೇವಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ರಾಜಕೀಯ ಶಕ್ತಿ ದೊರಕಿದ್ದಲ್ಲಿ, ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಬಗೆಹರಿಯಬಹುದೆಂಬ ಆಶಾವಾದದಿಂದ ದೇವರಲ್ಲಿ ಪ್ರಾರ್ಥಿಸಿಕೊಂಡಿರುವುದಾಗಿ ತಿಳಿದುಬಂದಿದೆ.

  ಈ ಸಂದರ್ಭದಲ್ಲಿ ಗೋಪಾಲ ನಾಯ್ಕ, ಎಮ್ಆರ್ ಗೌಡ, ಪಾಂಡು ನಾಯ್ಕ ಚನ್ನಮಾಂವ್, ಜೈವಂತ ಕಾನಗೋಡ, ಸುಧಾಕರ ಮಡಿವಾಳ ಬಿಳಗಿ, ಮಾಭ್ಲೇಶ್ವರ, ಜಿ.ಬಿ.ನಾಯ್ಕ ಕಡಕೇರಿ, ಸೀತಾರಾಮ, ಭಾಸ್ಕರ ನಾಯ್ಕ ಮುಗದೂರ, ರವಿ ನಾಯ್ಕ ಹಂಜಗಿ  ಮುಂತಾದವರು ಉಪಸ್ಥಿತರಿದ್ದರು.

  300x250 AD

  ರಾಜಕೀಯ ಶಕ್ತಿ ಅನಿವಾರ್ಯ :
   ಕಳೆದ 32 ವರ್ಷದಿಂದ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಸಾಂಘಿಕ ಹೋರಾಟ ಮಾಡುತ್ತಾ, ಸುಫ್ರೀಂ ಕೋರ್ಟಿನಲ್ಲೂ ಅರಣ್ಯವಾಸಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಅರಣ್ಯ ಭೂಮಿ ಸಮಸ್ಯೆಗಳ ಕುರಿತು ಆಳವಾದ ಕಾನೂನು ಜ್ಞಾನ ಹೊಂದಿ ನಿರಂತರ ಹೋರಾಟದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ರವೀಂದ್ರ ನಾಯ್ಕ ಅವರಿಗೆ ಗಟ್ಟಿ ರಾಜಕೀಯ ಧ್ವನಿ ಒದಗಿ ಬರಲೆಂದು ಪ್ರಾರ್ಥನೆ ಮಾಡಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಹೋರಾಟಗಾರರ ಪ್ರಮುಖರಾದ ಮಾಬ್ಲೇಶ್ವರ ನಾಯ್ಕ, ಬೇಡ್ಕಣಿ, ಗೋವಿಂದ ಗೌಡ ಹಾಗೂ ಸುನೀಲ್ ನಾಯ್ಕ ಸಂಪಖಂಡ ಅವರು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top