ಅಂಕೋಲಾ: ಶಾಂತಿನಿಕೇತನ ಸಂಸ್ಥೆಯಿಂದ ಆಯೋಜಿಸಲಾಗುವ ಮಕ್ಕಳ ಬೇಸಿಗೆ ರಜಾ ಶಿಬಿರ ಏಪ್ರಿಲ್ 5ರಿಂದ 29ರವರೆಗೆ ಮಠಾಕೇರಿ ಕ್ರಾಸ್‌ನಲ್ಲಿರುವ ಶಾಂತಿನಿಕೇತನ ಶಾಲೆಯಲ್ಲಿ ನಡೆಯಲಿದೆ ಎಂದು ಶಿಕ್ಷಕಿ ಶೀತಲ್ ನಾಯ್ಕ್ ತಿಳಿಸಿದ್ದಾರೆ.
ಕಳೆದ 8 ವರ್ಷದಿಂದ ಬೇಸಿಗೆ ರಜಾ ಶಿಬಿರವನ್ನು ಶಾಂತಿನಿಕೇತನ ಸಂಸ್ಥೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಈ ವರ್ಷದ ಬೇಸಿಗೆ ರಜಾ ಶಿಬಿರದಲ್ಲಿ 2 ವರ್ಷದಿಂದ 7 ವರ್ಷದ ಜೂನಿಯರ್ ವಿಭಾಗ ಮತ್ತು 8 ವರ್ಷದಿಂದ 15 ವರ್ಷದ ಸೀನಿಯರ್ ವಿಭಾಗ ಹೀಗೆ ಪ್ರತ್ಯೇಕ 2 ವಿಭಾಗದಲ್ಲಿ ಶಿಬಿರ ನಡೆಸಲಾಗುವುದು ಎಂದು ಅವರು ಹೇಳಿದರು.
ಶಿಬಿರದಲ್ಲಿ ಮೆಹಂದಿ, ಬಟ್ಟೆ ಪೈಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್, ಚಿತ್ರ ಕಲೆ, ವ್ಯಂಗ್ಯಚಿತ್ರ, ಯೋಗಾಸನ, ಮಡಿಕೆ ತಯಾರಿಕೆ ಮತ್ತು ಮಡಿಕೆ ಪೈಂಟಿಂಗ್, ನೃತ್ಯ, ನಿಸರ್ಗ ವೀಕ್ಷಣೆ, ಇಂಗ್ಲಿಷ್ ಸಂಭಾಷಣೆ ಮುಂತಾದ ಪತ್ಯೇತರ ಚಟುವಟಿಕೆಯ ಜೊತೆಗೆ ಒಂದು ದಿನ ಪಿಕ್ನಿಕ್ ಸಹ ಕರೆದುಕೊಂಡು ಹೋಗಲಾಗುವುದು. ಆಸಕ್ತ ಪಾಲಕರು ಮೊ.ಸಂ: Tel:+918971132229 ಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಮಮತಾ ನಾಯ್ಕ್, ಸಂಜೀವಿನಿ ಗಾಂವ್ಕರ್, ಶೃದ್ಧಾ ಆಚಾರ್ಯ, ಲಕ್ಷ್ಮಿ ನಾಯ್ಕ್, ಇವಾ ಇದ್ದರು.