ಕಾರವಾರ: ಹತ್ತು ರೂಪಾಯಿ ನಾಣ್ಯ ಮೂರು ಮಾದರಿಯಲ್ಲಿ ಲಭ್ಯವಿದೆ ಹಾಗೂ ಚಾಲ್ತಿಯಲ್ಲಿದೆ ಎಂದು ಇಲ್ಲಿನ ಎಸ್‌ಬಿಐ ಸಹಾಯಕ ವ್ಯವಸ್ಥಾಪಕ ಮೊಹಮ್ಮೊದ್ ಮುಬೀನ್ ತಿಳಿಸಿದ್ದಾರೆ.
ಹತ್ತು ರೂಪಾಯಿ ನಾಣ್ಯ ಆರ್‌ಬಿಐನ ಆದೇಶದಂತೆ ಅಧಿಕೃತವಾಗಿ ಚಾಲ್ತಿಯಲ್ಲಿದೆ. ಹತ್ತು ರೂಪಾಯಿ ನಾಣ್ಯ ಪಡೆಯಲು ವ್ಯಾಪಾರಸ್ಥರು ಗೋವಾ ಮತ್ತು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಡೆತಡೆಯಿಲ್ಲ. ಆದರೆ ಕಾರವಾರದಲ್ಲಿ ವ್ಯಾಪಾರಸ್ಥರು ಇದನ್ನು ಪಡೆಯುತ್ತಿಲ್ಲ ಎಂಬ ದೂರು ಇದೆ. ಅಲ್ಲದೇ ಗ್ರಾಹಕರು ಸಹ ಈ ನಾಣ್ಯ ಬಳಸಲು ಹಿಂದೇಟು ಹಾಕುತ್ತಿರುವ ದೂರುಗಳಿವೆ. ಹತ್ತು ರೂಪಾಯಿ ನಾಣ್ಯ ಚಾಲ್ತಿಯಲ್ಲಿದ್ದು, ಗ್ರಾಹಕರು ಮತ್ತು ವ್ಯಾಪಾರಸ್ಥರು ಯಾವುದೇ ಸಂಶಯಗಳಿಲ್ಲದೇ ಬಳಸಬಹುದು ಎಂದು ತಿಳಿಸಿದ್ದಾರೆ.
ಹತ್ತು ರೂಪಾಯಿ ನಾಣ್ಯಗಳು ಅಧಿಕ ಪ್ರಮಾಣದಲ್ಲಿ ಲಭ್ಯವಿದ್ದು, ಚಿಲ್ಲರೆ ಅವಶ್ಯಕತೆ ಇದ್ದ ವ್ಯಾಪಾರಸ್ಥರು ಬ್ಯಾಂಕ್‌ಗೆ ಬಂದು ಪಡೆಯಬಹುದು ಎಂದು ಹೇಳಿದ್ದಾರೆ.