• Slide
    Slide
    Slide
    previous arrow
    next arrow
  • ಸುಟ್ಟು ಕರಕಲಾದ ಕಲ್ಲಕೈ ತೋಟಕ್ಕೆ ಕಾಗೇರಿ ಭೇಟಿ: ಅಡಿಕೆ ವಿಮೆ ವ್ಯಾಪ್ತಿಗೆ ಅವಘಡ ಸೇರಿಸಲು ಆಗ್ರಹ

    300x250 AD

    ಶಿರಸಿ: ಅಗ್ನಿಯ ಕೆನ್ನಾಲಿಗೆಯಿಂದ ಸುಟ್ಟು‌ ಕರಕಲಾದ ತಾಲೂಕಿನ ಕಲ್ಲಕೈ ಐದಾಳಿಗದ್ದೆ ಅಡಿಕೆ ತೋಟಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಭೇಟಿ ನೀಡಿ ಬೆಂಕಿಯಿಂದ ಆದ ಹಾನಿಯನ್ನು ಪರಿಶೀಲಿಸಿದರು.


    ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಮಧುಕೇಶ್ವರ ಗಣಪತಿ ಹೆಗಡೆ ಎಂಬವರಿಗೆ ಸೇರಿದ ಸುಮಾರು 2 ಎಕರೆ ಕ್ಷೇತ್ರದ ಸಮೃದ್ಧ ತೋಟ ಬೆಂಕಿಗೆ‌ ಉರಿದು ಹೋಗಿತ್ತು. ಮೂವತ್ತು ಅಡಿಗೂ ಎತ್ತರದ ತೆಂಗಿನ ಮರ‌ಕೂಡ ಸುಟ್ಟು ಹೋಗಿದ್ದು, ಎರಡಕರೆ‌ ಕ್ಷೇತ್ರದಲ್ಲಿ ಒಂದಡಿಯೂ ಬಿಡದಷ್ಟು ಸುಟ್ಟಿದ್ದನ್ನು‌ ಕಂಡ ಕಾಗೇರಿ ಬೆಳೆಗಾರರಿಗೆ ಸಾಂತ್ವನ ನುಡಿದರು.

    ಫಸಲು ಕೊಡುವ ಅಡಿಕೆ, ಬಾಳೆ, ಕಾಳು ಮೆಣಸು, ಜಾಯಿಕಾಯಿ ಮರಗಳು ದಹಿಸಿ ಹೋಗಿದ್ದು, ಅದರ ಬದಲಿಗೆ ಪುನರ್ ಸೃಷ್ಟಿಯ ಬಗೆಗೂ ಕಾಗೇರಿ ಸಮಾಲೋಚನೆ ‌ನಡೆಸಿದರು. ಘಟನೆ ನಡೆದು 24 ಗಂಟೆಯಾದರೂ ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಪಂಚನಾಮೆ ನಡೆಸದ ಬಗ್ಗೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿ ತಕ್ಷಣ ಪಂಚನಾಮೆ ನಡೆಸಲು ಸೂಚಿಸುವುದಾಗಿ ಹೇಳಿದರು‌.
    ಒಂದು ಗಂಟೆಗೂ ಅಧಿಕ ಅಡಿಕೆ ತೋಟದಲ್ಲಿ ಸುತ್ತಾಟ ನಡೆಸಿದ ಕಾಗೇರಿ, ಬೆಂಕಿಯ ಪರಿಣಾಮ ಹಾಗೂ ಅದನ್ನು ನಂದಿಸಲು ಕೊಂಡ ಕ್ರಮಗಳು ಹಾಗೂ ಮುಂದೆ ಮಾಡಲೇಬೇಕಾದ ಕೆಲಸಗಳ ಕುರಿತು ಅಡಿಕೆ ಬೆಳೆಗಾರ ಮಧುಕೇಶ್ವರ ಹೆಗಡೆ ಮತ್ತು ದತ್ತಾತ್ರೇಯ ಹೆಗಡೆಯವರಲ್ಲಿ ಸಮಾಲೋಚನೆ ನಡೆಸಿದರು. ವಿದ್ಯುತ್ ತಂತಿ ಮಾರ್ಗ ಕೂಡ ಇದೆ ಮಾರ್ಗದಲ್ಲಿ ಹಾದು ಹೋಗಿದ್ದರಿಂದ ಅದರಿಂದ ಹಾನಿ ಸಂಭವಿಸುತ್ತೆ ಎಂಬುದರ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಸ್ಥಳ ಭೇಟಿ ನೀಡಿ ವರದಿ ಕೊಟ್ಟು ಪರಿಹಾರ ಒದಗಿಸಲು ಸೂಚನೆ ನೀಡುವುದಾಗಿ ಹೇಳಿದರು. ತಕ್ಷಣ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಪಂಚನಾಮೆ ನಡೆಸುವಂತೆ ಸೂಚಿಸುವುದಾಗಿ ಹೇಳಿದರು.

    300x250 AD

    ಯಡಹಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ. ಆರ್. ಹೆಗಡೆ ಬೆಳ್ಳೇಕೇರಿ, ಅಡಿಕೆ ಬೆಳೆ ವಿಮೆಯ ವ್ಯಾಪ್ತಿಯಲ್ಲಿ ಅಗ್ನಿ ಅವಘಡ, ಸಿಡಿಲು ಬಡಿದರೆ ಆಗುವ ಹಾನಿಗೆ ಪರಿಹಾರ ಸಂಗತಿ ಸೇರ್ಪಡೆಗೊಂಡಿಲ್ಲ. ಅಡಿಕೆ ಬೆಳೆ ವಿಮೆಯ ವ್ಯಾಪ್ತಿಯಲ್ಲಿ ಸೇರ್ಪಡೆಗೊಳಿಸಲು ಸೂಚಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.
    ಸ್ಥಳೀಯ‌ ಪ್ರಮುಖ ಭಾಸ್ಕರ ಹೆಗಡೆ ಯಡಹಳ್ಳಿ, ಅರಣ್ಯ ಇಲಾಖೆ ನೀಡುವ ವಿಮಾ ಪರಿಹಾರ ಮೊತ್ತಕ್ಕಿಂತ ಅತ್ಯಂತ ಕಡಿಮೆ ಮೊತ್ತ ಕಂದಾಯ ಇಲಾಖೆಯಲ್ಲಿದೆ. ಇದನ್ನು ಏರಿಸುವ ಅಗತ್ಯವಿದೆ ಎಂಬ ಆಗ್ರಹವನ್ನು ಮಾಡಿದರು. ಅಡಿಕೆ ಬೆಳೆಗಾರರಿಗೆ ಇತರ ದುರಂತಗಳಿಂದ ನಷ್ಟ 10 – 15 ವರ್ಷಗಳ ತನಕ ಆಗಲಿದ್ದು ಅದನ್ನು ಒದಗಿಸಲು ಸರ್ಕಾರದಿಂದ ಮಾತ್ರ ಸಾಧ್ಯ ಎಂಬ ಒತ್ತಾಯ ಕೂಡ ವ್ಯಕ್ತವಾಯಿತು.

    ಈ ವೇಳೆ ವಸಂತ ಭಟ್ಟ ಸಹಸ್ರಳ್ಳಿ, ಗ್ರಾಮ ಉಪಾಧ್ಯಕ್ಷ ರವೀಶ ಹೆಗಡೆ, ವಿನಾಯಕ ಹೆಗಡೆ, ಸತೀಶ್ ಹೆಗಡೆ, ರಮೇಶ ಹೆಗಡೆ, ಸೀತಾರಾಮ್ ಜಿ.ಹೆಗಡೆ, ಮಂಜುನಾಥ ಹೆಗಡೆ, ಎಸ್.ಪಿ.ಹೆಗಡೆ, ವಿ.ಯು.ಭಟ್ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top