Slide
Slide
Slide
previous arrow
next arrow

ಯಾವುದೇ ಭ್ರಷ್ಟರನ್ನು ಬಿಡಬೇಡಿ: ಸಿಬಿಐಗೆ ಪಿಎಂ ಮೋದಿ ಸೂಚನೆ

300x250 AD

ದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರೀಯ ತನಿಖಾ ದಳದ (ಸಿಬಿಐ) ವಜ್ರ ಮಹೋತ್ಸವ ಸಮಾರಂಭವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ಈ ವೇಳೆ ಶಿಲ್ಲಾಂಗ್, ಪುಣೆ ಮತ್ತು ನಾಗುರದಲ್ಲಿ ಹೊಸದಾಗಿ ನಿರ್ಮಿಸಲಾದ ಸಿಬಿಐ ಕಚೇರಿ ಸಂಕೀರ್ಣಗಳನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಿಬಿಐ ತನ್ನ ಕೆಲಸ ಮತ್ತು ತಂತ್ರಗಳ ಮೂಲಕ ಜನರಿಗೆ ನಂಬಿಕೆಯನ್ನು ನೀಡಿದೆ. ಇಂದಿಗೂ ಯಾವುದಾದರೂ ಒಂದು ಪ್ರಕರಣ ಇತ್ಯರ್ಥವಾಗದೇ ಉಳಿದಿದ್ದರೆ ಅದನ್ನು ಸಿಬಿಐಗೆ ವಹಿಸಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತವೆ. ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಸಾಧ್ಯವಿಲ್ಲ, ಆದ್ದರಿಂದ ಸಿಬಿಐಗೆ ದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ.

300x250 AD

ನೀವು ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರೋ ಅವರು ತುಂಬಾ ಶಕ್ತಿಶಾಲಿಗಳು ಎಂದು ನನಗೆ ತಿಳಿದಿದೆ, ಅವರು ವರ್ಷಗಳಿಂದ ಸರ್ಕಾರ ಮತ್ತು ವ್ಯವಸ್ಥೆಯ ಭಾಗವಾಗಿದ್ದಾರೆ. ಇಂದಿಗೂ ಅವರು ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾರೆ. ಆದರೆ ನೀವು (ಸಿಬಿಐ) ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಬೇಕು, ಯಾವುದೇ ಭ್ರಷ್ಟರನ್ನು ಬಿಡಬಾರದು ಎಂದು ಮೋದಿ ಒತ್ತಿ ಹೇಳಿದರು.

Share This
300x250 AD
300x250 AD
300x250 AD
Back to top