ಶಿರಸಿ: ಇನ್ಸ್ಪಾಯರ್ ಅವಾರ್ಡ ಸ್ಪರ್ಧೆಯಲ್ಲಿ ಎರಡು ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಇಲ್ಲಿನ ಗಣೇಶನಗರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ, ಸಾಯಿನಾಥ ಮಾಲದಕರ ಮತ್ತು ಮಾರ್ಗದರ್ಶಿ ಶಿಕ್ಷಕ ಕೆ.ಎಲ್.ಭಟ್ಟ ಏ. 10 ರಿಂದ 13 ರವರೆಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ‘ಪೈನ್’ ವೈಜ್ಞಾನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಪುರಸ್ಕಾರ ಪಡೆಯಲಿದ್ದಾರೆ.
ಹಾಗೆಯೇ ಪ್ರೌಢಶಾಲೆಯ ಸಮಯ ಮಹಾಲೆ ಮತ್ತು ಸ್ಫೂರ್ತಿ ಆಚಾರಿ ಅಹಮದಾಬಾದಿನಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಮಂಡಿಸಿದ ಪ್ರೊಜೆಕ್ಟ್’ಗೆ ರಾಷ್ಟ್ರಮಟ್ಟದ ಬಾಲವಿಜ್ಞಾನಿ ಪ್ರಶಸ್ತಿ ದೊರೆತಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಕೈಗೊಂಡ ಸಂಶೋಧನೆಯ ಸಾಧನೆಗೆ ಮತ್ತು ಬಡವಿದ್ಯಾರ್ಥಿಗಳ ಕಾಲೇಜು ವ್ಯಾಸಂಗಕ್ಕೆ ಸಹಾಯ ಕಲ್ಪಿಸಿಕೊಡುವ ಸಾಮಾಜಿಕ ಕಳಕಳಿ ಗುರುತಿಸಿ ನವದೆಹಲಿಯ ಗ್ಲೋಬಲ್ ಗ್ರೋಥ್ ಎಜ್ಯುಕೇಶನ್‌ನವರು ಕೆ.ಎಲ್.ಭಟ್’ಗೆ ‘ಭಾರತ ಶಿಕ್ಷಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಾಧನೆಗೆ ಕಾರಣೀಕರ್ತರಾದವರನ್ನು ಉಪನಿರ್ದೇಶಕರಾದ ಪಿ. ಪಾರಿಬಸಪ್ಪ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಎಂ.ಎಸ್.ಹೆಗಡೆ, ಕುಮಟಾ ಡಯಟ್ ಪ್ರಾಂಶುಪಾಲರಾದ ನಾಗರಾಜ ನಾಯಕ, ಶಿರಸಿ ಡಯಟ್ ಪ್ರಾಂಶುಪಾಲರಾದ ಕಲ್ಪನಾ ಶೆಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪ್ರಕಾಶ ಆಚಾರಿ,ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕವೃಂದದವರು ಅಭಿನಂದಿಸಿದ್ದಾರೆ.