• Slide
    Slide
    Slide
    previous arrow
    next arrow
  • ‘ದಡವ ನೆಕ್ಕಿದ ಹೊಳೆ’ ಕೃತಿ ಬಿಡುಗಡೆ

    300x250 AD

    ಶಿರಸಿ: ರಾಷ್ಟ್ರದ ಪ್ರಮುಖ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ ಶಿರಸಿ, ಅವರ ರಂಗ ಪಯಣದ ಕಥನ ‘ದಡವ ನೆಕ್ಕಿದ ಹೊಳೆ’ ಕೃತಿಯು ಮೈಸೂರಿನಲ್ಲಿ ಬಿಡುಗಡೆ ಕಂಡಿತು. ಪ್ರತಿಷ್ಠಿತ ಬಹುರೂಪಿ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ‘ನಟನ ರಂಗಶಾಲೆ’ಯಲ್ಲಿ ನಟ ಪ್ರಕಾಶ ರೈ ಬಿಡುಗಡೆ ಮಾಡಿದರು.

    ರಂಗಕರ್ಮಿ, ನಟ ಬಿ.ಸುರೇಶ್, ಲೇಖಕಿ ದೀಪಾ ಹಿರೇಗುತ್ತಿ, ಬಹುರೂಪಿಯ ಜಿ.ಎನ್.ಮೋಹನ್ ಇತರರು ಉಪಸ್ಥಿತರಿದ್ದರು. ನಂತರ ‘ನಟನ ರಂಗ ಪಯಣ’ ರೆಪರ್ಟರಿ ತಂಡದ ಹೊಸ ರಂಗಪ್ರಯೋಗ ‘ಕಣಿವೆಯ ಹಾಡು’ ಎಂಬ ನಾಟಕವು ಡಾ.ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಪ್ರದರ್ಶನ ಕಂಡಿತು. ನಟನದ ಮೇಘ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸಿ ಗಮನ ಸೆಳೆದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top