Slide
Slide
Slide
previous arrow
next arrow

ಕಾಮಗಾರಿ ಘೋಷಣೆ, ಭೂಮಿ ಪೂಜೆ ಪ್ರಚಾರ ತಂತ್ರ: ರವೀಂದ್ರ ನಾಯ್ಕ

300x250 AD

ಶಿರಸಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಿರಸಿ-ಸಿದ್ಧಾಪುರ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಯ ಕಾಮಗಾರಿಗಳಿಗೆ ಹಣ ಮಂಜೂರಿ ಇಲ್ಲದೇ, ಕಾಮಗಾರಿ ಘೋಷಿಸಿ, ಸ್ಥಳೀಯ ಶಾಸಕರು ಭೂಮಿ ಪೂಜೆ ಮಾಡಿರುವುದು ಚುನಾವಣೆ ಪ್ರಚಾರ ತಂತ್ರವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಸ್ಥಳೀಯ ಶಾಸಕರ ನೀತಿಯನ್ನು ಟೀಕಿಸಿದ್ದಾರೆ.

ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭೂಮಿ ಪೂಜೆ ಮಾಡುತ್ತಿರುವ ಕಾಮಗಾರಿಗಳು ಆಯವ್ಯಯರಹಿತ  ಕಾಮಗಾರಿಯಾಗಿದ್ದು, ಟೆಂಡರ್ ಪ್ರಕ್ರಿಯೆ ಜರುಗದೇ, ಹಣ ಬಿಡುಗಡೆಗೊಳ್ಳದೇ, ಕಾಮಗಾರಿ ಆದೇಶ ಪ್ರಕ್ರಿಯೆ ಪೂರ್ವದಲ್ಲಿಯೇ ಕೇವಲ ಮತಗಳಿಸುವ ಪ್ರಚಾರ ತಂತ್ರದ ಕಾರ್ಯವಾಗಿದೆ ಎಂದು ಅವರು ತಾಲೂಕಿನ, ಹುತ್ಗಾರ್ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ ವಿತರಿಸುವ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.

 ಈಗಾಗಲೇ ಭೂಮಿ ಪೂಜೆ ಮಾಡಿರುವ ಐಗಿನಮನೆ, ಮುಂಡಗಾರ್ ಸೇತುವೆ, ಮುಂತಾದ ಶಿರಸಿ-ಸಿದ್ಧಾಪುರ ತಾಲೂಕಿನ ಸುಮಾರು 15-16 ಕಾಮಗಾರಿಗಳ ಭೂಮಿ ಪೂಜೆ ಜರುಗಿದರೂ, ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗಿರುವುದರಿoದ ಈಗಾಗಲೇ ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ನಿರ್ಬಂಧ ಹೇರುವುದರಿಂದ ತರಾತುರಿಯಲ್ಲಿ ಭೂಮಿ ಪೂಜೆ ಮಾಡಿರುವುದು ಚುನಾವಣೆ ಗಿಮಿಕ್ ಆಗಿದೆ ಎಂದು ಅವರು ವ್ಯಾಖ್ಯಾಯಿಸಿದ್ದಾರೆ.

300x250 AD

ನೂರು ಕೋಟಿಗೂ ಮಿಕ್ಕಿ ಬಾಕಿ:
 ಶಿರಸಿ ಉಪ ವಿಭಾಗದ ವಿವಿಧ ಇಲಾಖೆಯ ಪೂರ್ತಿಯಾಗಿರುವ ಟೆಂಡರ್ ಕಾಮಗಾರಿ ಸುಮಾರು ನೂರು ಕೋಟಿ ಮಿಕ್ಕಿ ಗುತ್ತಿಗೆದಾರರಿಗೆ ನೀಡಬೇಕಾದದ್ದು ಬಾಕಿ ಇದ್ದಾಗಲೂ, ಹೆಡ್ ಆಫ್ ಏಕೌಂಟ್‌ನಲ್ಲಿ ಹಣ ಇಲ್ಲದಿದ್ದಾಗಲೂ ಸಹಿತ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತ್ತಿರುವುದು ಚುನಾವಣೆಯ ಮತಗಳಿಸುವ ತಂತ್ರವಾಗಿದೆ ಎಂದು ರವೀಂದ್ರ ನಾಯ್ಕ ಆರೋಪಿಸಿದ್ದಾರೆ.

 ಈ ಸಂದರ್ಭದಲ್ಲಿ ಯುವ ಧುರೀಣರಾದ ಪ್ರದೀಪ್ ಸಂಜೀವ್ ಶೆಟ್ಟಿ, ನಾಗರಾಜ ಕೃಷ್ಣ ಮುಕ್ರಿ, ಶ್ರೀಧರ ನಾರಾಯಣ ಪೂಜಾರಿ, ಸುರೇಶ್ ಮುನಿಯ ಭೋವಿವಡ್ಡರ್, ಗೋಪಾಲ ಹಾಲಪ್ಪ ಪೂಜಾರಿ, ಮಾಭ್ಲೇಶ್ವರ ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top