Slide
Slide
Slide
previous arrow
next arrow

ಸ್ವೀಪ್ ಚಟುವಟಿಕೆಯಡಿ ಮತದಾನ ಜಾಗೃತಿ ಜಾಥಾ

300x250 AD

ಕಾರವಾರ: ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಅಂಗವಾಗಿ ಸ್ವೀಪ್ ಚಟುವಟಿಕೆಯಡಿ ಕಡ್ಡಾಯ ಹಾಗೂ ನಿಷ್ಪಕ್ಷಪಾತ ಮತದಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕೆನರಾ ಅರಣ್ಯ ವೃತ್ತ ಶಿರಸಿ, ಕಾರವಾರ ಅರಣ್ಯ ವಿಭಾಗ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನಿoದ ಗುರುವಾರ ನಗರದ ರವೀಂದ್ರನಾಥ ಠಾಗೋರ್ ಕಡಲತೀರದಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಕಾಜುಭಾಗದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದ ವನಸಿರಿ ಭವನದವರೆಗೆ ಸುಗ್ಗಿ ಕುಣಿತದ ಕಲಾವಿದರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ನ ಅಧಿಕಾರಿಗಳು, ಸಿಬ್ಬಂದಿ ಮತದಾನ ಪ್ರಕ್ರಿಯೆ, ಕಡ್ಡಾಯ ಮತದಾನದ ಬಗೆಗಿನ ಘೋಷವಾಕ್ಯ ಕೂಗುತ್ತ ಕಾಲ್ನಡಿಗೆ ಜಾಗೃತಿ ಜಾಥಾ ನಡೆಸಿದರು.

ನಂತರ ಕಾಜುಭಾಗದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವಣದ ವನಸಿರಿ ಭವನದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಯಕ್ಷಗಾನ ಕಲೆ, ಬ್ಯಾನರ್ ಪ್ರದರ್ಶನ, ಸೆಲ್ಪಿ ಸ್ಟ್ಯಾಂಡ್, ಎಲ್‌ಇಡಿ ಸ್ಕ್ರೀನ್ ಬಳಸಿ ಚುನಾವಣಾ ಆಯೋಗದಿಂದ Main Bharath Hoon Bharath Ke Mata Data Hai ಚುನಾವಣೆಯ ಧ್ಯೇಯ ಗೀತೆಯನ್ನು ಪ್ರಸಾರ ಹಾಗೂ ಚುನಾವಣಾ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಮತದಾನದ ಬಗ್ಗೆ ವಿವರವಾಗಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಕ್ಷಗಾನ, ಸುಗ್ಗಿ ಕುಣಿತದ ಕಲಾವಿದರು, ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಮತದಾನದ ಮಹತ್ವ ಸಾರುವ ಸೆಲ್ಪಿ ಸ್ಟ್ಯಾಂಡ್‌ನಲ್ಲಿ ನಿಂತು ಫೋಟೋ ತೆಗೆದುಕೊಂಡು ತಪ್ಪದೇ ಮತದಾನ ಮಾಡುವ ಭರವಸೆ ವ್ಯಕ್ತಪಡಿಸಿದರು.

300x250 AD
Share This
300x250 AD
300x250 AD
300x250 AD
Back to top