• Slide
    Slide
    Slide
    previous arrow
    next arrow
  • ಆರ್.ಎನ್. ಹೆಗಡೆ ಗೋರ್ಸಗದ್ದೆಗೆ ಸನ್ಮಾನ

    300x250 AD

    ಸಿದ್ದಾಪುರ: ಸ್ಥಳೀಯ ಟಿ.ಎಂ.ಎಸ್.ದಿoದ 2022ರ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎನ್. ಹೆಗಡೆ ಗೋರ್ಸಗದ್ದೆ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಸುಶೀಲಾ ಹೆಗಡೆ ಅವರನ್ನೂ ಸಹ ಸತ್ಕರಿಸಲಾಯಿತು.
    ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅವರ ಆರ್.ಎನ್. ಹೆಗಡೆಯವರ ಸಹಕಾರಿ ಸೇವೆಯನ್ನು ಹಾಗೂ ಸಾಮಾಜಿಕ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು. ಯಲ್ಲಾಪುರ ಟಿ.ಎಂ.ಎಸ್.ನ ಅಧ್ಯಕ್ಷರಾಗಿ, ಟಿ.ಡಿ.ಬಿ. ಅಧ್ಯಕ್ಷರಾಗಿ, ಇನ್ನೂ ಅನೇಕ ಸಂಘ-ಸoಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಅಪಾರ ಜನಮನ್ನಣೆಯನ್ನು ಗಳಿಸಿದ ಸಹಕಾರಿ ಧುರೀಣ ಆರ್.ಎನ್.ಹೆಗಡೆ ಗೋರ್ಸಗದ್ದೆ ಎಂದು ಶ್ಲಾಘಿಸಿದರು.
    ಈ ಸಂದರ್ಭದಲ್ಲಿ ಸಾಹಿತಿಗಳಾದ ಜಿ.ಜಿ. ಹೆಗಡೆ ಬಾಳಗೋಡ ಅವರೂ ಕೂಡಾ ಉಪಸ್ಥಿತರಿದ್ದರು. ಸನ್ಮಾನಕ್ಕೆ ಆರ್.ಎನ್.ಹೆಗಡೆ ಗೋರ್ಸಗದ್ದೆಯವರು ಕತಜ್ಞತೆಯನ್ನು ಅರ್ಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top