Slide
Slide
Slide
previous arrow
next arrow

ಏ.6ಕ್ಕೆ ಮಂಜುಗುಣಿ ವೆಂಕಟರಮಣ ದೇವರ ರಥೋತ್ಸವ

300x250 AD

ಶಿರಸಿ: ತಾಲೂಕಿನ ಮಂಜುಗುಣಿಯ ಪುರಾಣಪ್ರಸಿದ್ಧ ವೆಂಕಟರಮಣ ದೇವರ ರಥೋತ್ಸವ ಏ.6ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏ.1ರಂದು ಬೆಳಗ್ಗೆ ಧ್ವಜಪೂಜೆ, ಧ್ವಜಾರೋಹಣ, ಧ್ವಜಬಲಿ, ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಸಂಜೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ರತ್ನಮಂಟಪೋತ್ಸವ, ಏ.2ರಂದು ಬೆಳಗ್ಗೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಗಜಯಂತ್ರೋತ್ಸವ, ಏ.3ರಂದು ಬೆಳಗ್ಗೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ಸಂಜೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಸಿಂಹಯoತ್ರೋತ್ಸವ, ಏ.4ರಂದು ಬೆಳಗ್ಗೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಮಧ್ಯಾಹ್ನ ಧನಲಕ್ಷ್ಮಿ ಪೂಜಾ, ಕಾಣಿಕೆ ಡಬ್ಬಿ ಪೂಜೆ, ಮುಸಲಪೂಜಾ ಚೂರ್ಣಿಕರಣ, ಸಂಜೆ ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ಶೇಷಯಂತ್ರೋತ್ಸವ ಇದೆ.
ಏ.5ರಂದು ಬೆಳಗ್ಗೆ ದೇವರ ವರ್ಧಂತಿ ಉತ್ಸವ, ಹಂಡೆ ಪೂಜೆ, ಪಾಕಸಿದ್ಧಿ, ಅನ್ನ ಸಂಗ್ರಹ, ಕ್ಷೇತ್ರಪ್ರಾಕಾರ ಬಲಿ, ಭೂತರಾಜ ಬಲಿ, ವರ್ಧಂತಿ, ಮಹಾ ಸಂತರ್ಪಣೆ, ಮಧ್ಯಾಹ್ನ ಸೂರ್ಯಪ್ರಭಾ ಉತ್ಸವ, ರಾತ್ರಿ ಕ್ಷೇತ್ರಪ್ರಾಕಾರ ಬಲಿ, ಧ್ವಜ ಪ್ರಾಥನೆ, ಮಹಾ ದಂಡಬಲಿ, ವಿಶೇಷ ಭೂತರಾಜ ಬಲಿ, ಗರುಡಯಂತ್ರೋತ್ಸವ, ಏ. 6ರಂದು ಶ್ರೀದೇವರ ರಥೋತ್ಸವವಿದ್ದು, ಪ್ರಾತಃಕಾಲ ಮಹಾರಥ ಶುದ್ಧಿ, ರಥ ಬಲಿ, ರಥಾಗಮನ, ರಥಾರೋಹಣ, ಪೂಜಾ ಪ್ರಾರ್ಥನ ರಥನಯನ( ರಥ ಎಳೆಯುವುದು), ನಂತರ ಭಕ್ತರಿಗೆ ಶ್ರೀದೇವರ ದರ್ಶನವಿರುತ್ತದೆ. ಅಂದು ರಾತ್ರಿ 9 ಗಂಟೆಗೆ ಮರ್ಯಾದೆ ಕಾಯಿ ಹಂಚುವುದು, ರಥದ ಗಾಲಿಗೆ ಕಾಯಿ ಒಡೆಯುವುದು, ರಥಾವರೋಹಣ, ವಸಂತಪೂಜೆ ಇದೆ. ಏ. 7ರಂದು ಮಧ್ಯಾಹ್ನ ವಸಂತಪೂಜಾ ಸಂವಾದ, ಕಲಹ, ಅಂಕುರ ಸಮರ್ಪಣ ಪೂಜಾ ಪ್ರಸಾದ ವಿತರಣೆ, ಅವಭೃತ ತೀರ್ಥ ಸ್ನಾನ, ಪೂರ್ಣಾಹುತಿ, ಧ್ವಹಾವರೋಹಣ, ಏ.19ರಂದು ಅಮವಾಸ್ಯೆಯ ದಿನ ಸಂಪ್ರೋಕ್ಷಣ ಇರುತ್ತದೆ ಎಂದು ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top