Slide
Slide
Slide
previous arrow
next arrow

ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ: ಅಜ್ಜಪ್ಪ ಸೊಗಲದ

300x250 AD

ಯಲ್ಲಾಪುರ: ಬುಧವಾರ ಮಧ್ಯಾಹ್ನ 12.30ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು.
ಅವರು ತಹಶಿಲ್ದಾರರ ಕಾರ್ಯಾಲಯದಲ್ಲಿ ಬುಧವಾರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಿದ್ದು, 13 ಅತಿ ಸೂಕ್ಷ್ಮ ಮತಗಟ್ಟೆ, 32 ಸೂಕ್ಷ್ಮ ಮತಗಟ್ಟೆ, 11 ಮಾದರಿ ಮತಗಟ್ಟೆ, ಉಮ್ಮಚಗಿ ಪಂಚಾಯಿತಿ ವ್ಯಾಪ್ತಿಯ ಕೋಟೆಮನೆಯಲ್ಲಿ ಸಿದ್ದಿ ಮಾದರಿ ಮತಗಟ್ಟೆ, 5 ಮಹಿಳಾ ಸಿಬ್ಬಂದಿಗಳು ನಿರ್ವಹಿಸುವ ಮತಗಟ್ಟೆ, 2 ವಿಕಲಚೇತನರು ನಿರ್ವಹಿಸುವ ಮತಗಟ್ಟೆ ಹಾಗೂ 2 ಯುವ ಸಿಬ್ಬಂದಿಗಳಿoದ ನಿರ್ವಹಿಸುವ ಮತಗಟ್ಟೆಗಳಾಗಿವೆ. ಕ್ಷೇತ್ರದಲ್ಲಿ ಒಟ್ಟು 1,79,474 ಮತದಾರರಿದ್ದು, ಅದರಲ್ಲಿ ಪುರುಷರು 90937, ಮಹಿಳೆಯರು 88537, ಯುವ ಮತದಾರರು 4234, ವಿಕಲಚೇತನ ಮತದಾರರು 2148, 80 ವರ್ಷ ವಯಸ್ಸು ದಾಟಿದ ಮತದಾರರ ಸಂಖ್ಯೆ 3022 ಗಳಾಗಿವೆ ಎಂದರು.
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಯಲ್ಲಾಪುರ ತಾಲೂಕಿನ ಕಿರವತ್ತಿ, ಮುಂಡಗೋಡು ತಾಲೂಕಿನ ಅಗಡಿ, ಸನವಳ್ಳಿ, ಬಾಚಣಕಿ, ಬನವಾಸಿ ಹೋಬಳಿಯ ದಾಸನಕೊಪ್ಪ ಮತ್ತು ತಿಗಣಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಚುನಾವಣೆಗಾಗಿ 22 ಸೆಕ್ಟರ್ ಅಧಿಕಾರಿಗಳು, 8 ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, 8 ವಿಡಿಯೋ ವೀಕ್ಷಣಾ ತಂಡ (ವಿವಿಟಿ), 5 ವಿಡಿಯೋ ಕಣ್ಗಾವಲು ತಂಡ (ವಿಎಸ್‌ಟಿ), 18 ಸ್ಥಾಯೀ ಕಣ್ಗಾವಲು ತಂಡ (ಎಸ್‌ಎಸ್‌ಟಿ), 1 ಅಕೌಂಟಿAಗ್ ತಂಡ, 3 ಜನ ಮಾಸ್ಟರ್ ಟ್ರೇನರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಯೋಜನೆಗಳು ಪ್ರದರ್ಶಿಸುವ ಬ್ಯಾನರ್ ಮತ್ತು ಕಟೌಟಗಳಲ್ಲಿ ಹಿಂದಿನ ಜನಪ್ರತಿನಿಧಿಗಳ ಭಾವಚಿತ್ರಗಳು ಸಾರ್ವಜನಿಕವಾಗಿ ಪ್ರದರ್ಶನವಾಗದಂತೆ ಎಲ್ಲ ಕಡೆ ಈಗಾಗಲೇ ಮುಚ್ಚಲಾಗಿದೆ. ಇನ್ನೂ ಎಲ್ಲಿಯಾದರೂ ಅಂತಹ ಭಾವಚಿತ್ರಗಳು ಕಂಡುಬoದರೆ ಈ ಕುರಿತು ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ಯಲ್ಲಾಪುರ ತಹಶೀಲ್ದಾರ ಶಂಕರಪ್ಪ ಮಾಹಿತಿ ನೀಡಿ, ಯಲ್ಲಾಪುರ ತಾಲೂಕಿನಲ್ಲಿ ಒಟ್ಟು 65,464 ಮತದಾರರಿದ್ದಾರೆ. ಅದರಲ್ಲಿ 32,795 ಪುರುಷ ಮತದಾರರು, 32,669 ಮಹಿಳಾ ಮತದಾರರು, 1,499 ಯುವ ಮತದಾರರು, 73 ವಿಕಲಚೇತನ ಮತದಾರರು, 80 ವರ್ಷ ದಾಟಿದ 1,388 ಮತದಾರರಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿ ಒಟ್ಟು 96 ಮತಗಟ್ಟೆಗಳಿವೆ ಎಂದು ಹೇಳಿದರು.

300x250 AD
Share This
300x250 AD
300x250 AD
300x250 AD
Back to top