Slide
Slide
Slide
previous arrow
next arrow

ಪಿಎಸ್‌ಐ ನಾಗಪ್ಪಗೆ ಮುಖ್ಯಮಂತ್ರಿ ಪದಕ

300x250 AD

ಕಾರವಾರ: ರಾಜ್ಯದ 42 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು, ನಗರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿ ಅವರನ್ನೂ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಎಂ.ಎ ಕನ್ನಡ ವ್ಯಾಸಂಗ ಮಾಡಿರುವ ನಾಗಪ್ಪ, ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಜಿಲ್ಲೆಯ ಪಾಮನಕಲ್ಲೂರಿನವರು. 2015ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾದ ಅವರು, ಕಲಬುರಗಿಯ ಕುಂಚಾವರ, ಯಡ್ರಾಮಿ, ದಾಂಡೇಲಿ ನಗರ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಕಾರವಾರ ನಗರ ಸಂಚಾರ ಠಾಣೆಯ ಪಿಎಸ್‌ಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಂಡು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಸುಮಾರು 10,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ಅಂದಾಜು 52 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ, ಹಿಟ್ ಅಂಡ್ ರನ್ ಪ್ರಕರಣಗಳ ಪತ್ತೆ, ನಗರದಲ್ಲಿ ವಾಹನಗಳ ನೂತನ ಪಾರ್ಕಿಂಗ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅವರು ಪ್ರಯತ್ನ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿಬ್ಬಂದಿಗಳಿಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ 13 ಸಂಚಾರ ಪೊಲೀಸ್ ಚೌಕಿಗಳು ಮತ್ತು 55 ಬ್ಯಾರಿಕೇಡ್‌ಗಳ ನಿರ್ಮಾಣ ಮತ್ತು ಠಾಣಾ ಮರು ನವಿಕರಣ ಕಾರ್ಯ, ರಸ್ತೆ ಅಪಘಾತಗಳನ್ನು ತಡೆಯಲು ವಿನೂತನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಏಕಗವಾಕ್ಷಿ ಯೋಜನೆಯಡಿಯಲ್ಲಿ ಸಾರ್ವಜನಿಕ ವಾಹನ ದಾಖಲೆಗಳ ತಿದ್ದುಪಡಿ ಅಭಿಯಾನ ನಡೆಸಿದ್ದರು.
‘ಹೆಲ್ಮೆಟ್ ಧರಿಸಿ – ಜೀವ ಉಳಿಸಿ’ ಜಾಗೃತಿ ಜಾಥಾ ಅಭಿಯಾನ, ಶಾಲಾ- ಕಾಲೇಜುಗಳಲ್ಲಿ ರಸ್ತೆ ಅಪಘಾತ ತಡೆ ಕುರಿತು ವಿಶೇಷ ಜಾಗೃತಿ ಉಪನ್ಯಾಸ, ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಉಪನ್ಯಾಸ, ‘ನನ್ನನ್ನು ಕ್ಷಮಿಸಿ’ ಹೆಲ್ಮೆಟ್ ಜಾಗೃತಿ ಅಭಿಯಾನ, ‘ರಸ್ತೆ ಅಪಘಾತ ಮುಕ್ತ ಭಾರತಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿ’ ಸಹಿ ಸಂಗ್ರಹ ಅಭಿಯಾನ ಮತ್ತು ಜಾಗೃತಿ ಜಾಥಾ, ಆಟೋ/ಲಘು/ಭಾರಿ/ಅಂಬೂಲೆನ್ಸ್/ ಟೂರ್ಸ್ ಮತ್ತು ಟ್ರಾವೆಲ್ಸ್/ಸಾರಿಗೆ ಇಲಾಖೆ/ ವಾಹನ ಚಾಲಕರಿಗೆ ರಸ್ತೆ ಅಪಘಾತಗಳ ಜಾಗೃತಿ ಕಾರ್ಯಕ್ರಮ, ಆಟೋ ಚಾಲಕರಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ, ‘ರನ್ ಫಾರ್ ರೋಡ್ ಸೇಫ್ಟಿ’ ಜಾಗೃತಿ ಅಭಿಯಾನ ಹೀಗೆ ರಸ್ತೆ ಅಪಘಾತ ತಡೆ ಮತ್ತು ಸಾರ್ವಜನಿಕ ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷ ಮತ್ತು ಪ್ರಾಮಾಣಿಕ ಪ್ರಯತ್ನ ನಡೆಸಿರುವ ಅವರು ಈ ಸಾಲಿನ ಸಿಎಂ ಮೆಡಲ್‌ಗೆ ಆಯ್ಕೆಯಾಗಿದ್ದಾರೆ.
ಕೇವಲ ಪೊಲೀಸ್ ಆಗಿದರೆ, ಸಾಹಿತ್ಯ ಸೇವೆಯಲ್ಲೂ ತೊಡಗಿಕೊಂಡಿರುವ ನಾಗಪ್ಪ, ಪುಸ್ತಕಗಳನ್ನೂ ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಗೂ ಅನೇಕ ಪ್ರಶಸ್ತಿಗಳು ದೊರೆತಿವೆ. ಏಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆಯ ದಿನದಂದು ಸಿಎಂ ಮೆಡಲ್ ಪ್ರದಾನ ಮಾಡಲಾಗುತ್ತದೆ.

300x250 AD
Share This
300x250 AD
300x250 AD
300x250 AD
Back to top