ಕಾರವಾರ: ನೆಹರು ಯುವ ಕೇಂದ್ರ, ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ (ಸಿಬಿಒ) ಯುವ ಸಂವಾದ- ಭಾರತ@2047 ಕಾರ್ಯಕ್ರಮವನ್ನು ಏ.01ರಿಂದ ಮೇ 31ರವರೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಿಂದ 3 ಸಿಬಿಒಗಳನ್ನು ಆಯ್ಕೆ ಮಾಡಲಾಗುವುದು. CBOಗಳು, ರಾಜಕೀಯೇತರ ಪಕ್ಷತೀತವಾಗಿ ಕಳಂಕರಹಿತ ಇತಿಹಾಸವನ್ನು ಹೊಂದಿರುವ ಮತ್ತು ಯುವ ಸಂವಾದ ಕಾರ್ಯಕ್ರಮವನ್ನು ನಡೆಸಲು ಸಾಕಷ್ಟು ಸಾಂಸ್ಥಿಕ ಶಕ್ತಿಯನ್ನು ಹೊಂದಿರಬೇಕು. ಸಂಸ್ಥೆಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇರಬಾರದು. ಆಸಕ್ತ ಸಿಬಿಒಗಳು ಅರ್ಜಿ ನಮೂನೆಗಳನ್ನು ಜಿಲ್ಲಾ ನೆಹರು ಯುವ ಕೇಂದ್ರದಿoದ ಪಡೆದು ಭರ್ತಿ ಮಾಡಿ ಏ.10ರೊಳಗೆ ಸಲ್ಲಿಸಬೇಕು
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ tel;+9108382226965, Tel: 919449992195 ಗೆ ಸಂಪರ್ಕಿಸಿ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.