• Slide
  Slide
  Slide
  previous arrow
  next arrow
 • ಅಕ್ರಮ ಜಾನುವಾರು ಸಾಗಾಟ; ಮೂವರ ವಿರುದ್ಧ ಪ್ರಕರಣ ದಾಖಲು

  300x250 AD

  ಹೊನ್ನಾವರ: ಯಾವುದೇ ಪಾಸ್ ಪರ್ಮಿಟ್ ಹೊಂದಿರದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
  ತಾಲೂಕಿನ ಹಳದಿಪುರದ ರಾಷ್ಟ್ರೀಯ ಹೆದ್ದಾರಿ 66ರ ಅಗ್ರಹಾರ ಗಣಪತಿ ದೇವಸ್ಥಾನ ಎದುರಿಗೆ ವಾಹನ ಪತ್ತೆಯಾಗಿದೆ. ಬೈಂದೂರ ಕಡೆಯಿಂದ ಪೂನಾ ಕಡೆಗೆ ಜಾನುವಾರು ಸಾಗಿಸುತ್ತಿದ್ದರು ಎನ್ನಲಾಗಿದೆ. ಸರಿಯಾದ ಗಾಳಿ ಬೆಳಕು ಇರುವ ಕಂಪಾರ್ಟ್ಮೆ0ಟಿನ ವ್ಯವಸ್ಥೆ ಮಾಡದೆ ಹಾಗೂ ಜಾನುವಾರುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡದೇ, ಹಿಂಸಾತ್ಮಕವಾಗಿ ತುಂಬಿಕೊoಡು ಜಾನುವಾರುಗಳನ್ನು ವಧೆ ಮಾಡುವ ಉದ್ದೇಶಕ್ಕೆ ಲಾರಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
  ಲಾರಿಯಲ್ಲಿ 4 ಆಕಳು, 7 ಕರು, ಒಟ್ಟು 11 ಜಾನುವಾರುಗಳಿದ್ದವು. ಆರೋಪಿತರಾದ ಧಾರವಾಡ ಜಿಲ್ಲೆಯ ರಾಜೀವಗಾಂಧೀ ನಗರ 2ನೇ ಕ್ರಾಸ್ ನಿವಾಸಿ, ವೃತ್ತಿಯಲ್ಲಿ ಚಾಲಕನಾಗಿರುವ ಸಂತೋಷ ಮಂಟೂರ್, ಇನ್ನೋರ್ವ ಬೈಂದೂರು ತಾಲೂಕಿನ ಶಿರೂರು ನಿವಾಸಿ, ಕೊರಿಯರ್ ಕೆಲಸ ನಿರ್ವಹಿಸುತ್ತಿರುವ ನಾಗರಾಜ ಮೊಗೇರ, ಧಾರವಾಡ ಜಿಲ್ಲೆಯ ಜೊಡ ಕ್ರಾಸ್ ನಿವಾಸಿ, ಕ್ಲೀನರ್ ಕೆಲಸದಲ್ಲಿರುವ ಮಣಿಕಂಠ ದೇಸಾಯಿಪಟ್ಟಿ ಎನ್ನುವವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top