ಕಾರವಾರ: ಮೇಲು ಕೀಳು ಎನ್ನುವ ಭಾವನೆ ಸಮಾಜವನ್ನು ಒಡೆಯುತ್ತಿದ್ದ ಸಮಯದಲ್ಲೂ ವಚನ ಸಾಹಿತ್ಯ ಹುಟ್ಟಿಕೊಂಡಿದೆ ಎಂದು ಎಂದು ಸಿದ್ದರ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಮನೋಜೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತಿಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಎಲ್ಲಾ ಸಮುದಾಯದ ವಚನಕಾರರು ಇದ್ದರು. ಹೀಗಾಗಿ ಸಮಾಜ ಸುಧಾರಣೆಯಲ್ಲಿ ಎಲ್ಲರ ಪಾತ್ರವೂ ಇದೆ. ಕರ್ನಾಟಕದಲ್ಲಿ 11 ಮತ್ತು 12ನೇ ಶತಮಾನದಲ್ಲಿ ಹಲವಾರು ಆದರ್ಶಮಯ ಸಂತರು ಜೀವಿಸಿದ್ದರು. ಆಗ ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳು ಕಷ್ಟಕರವಾಗಿದ್ದವು. ಸಾಮಾಜಿಕ ಸ್ಥಿತಿಗಳು ಅಂತರವನ್ನು ಉಂಟುಮಾಡಿದ್ದವು. ಮೇಲು ಕೀಳು ಎನ್ನುವ ಭಾವನೆ ಹೆಚ್ಚಾಗಿತ್ತು. ಅಂತಹ ಸಮಯದಲ್ಲಿ ವಚನ ಸಾಹಿತ್ಯ ಹುಟ್ಟಿಕೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡಿತ್ತು. ದೇವರ ದಾಸಿಮಯ್ಯ ಅದರ ಆರಂಭ ಮಾಡಿದ್ದರು ಎಂದರು.
ಯಾವುದೇ ವಿಷಯ ಆರಂಭಸಬೇಕಾದರೂ ಮೊದಲು ಮನಸಿನಲ್ಲಿ ಮೂಡಬೇಕು. ಬಳಿಕ ಮಾತ್ರವೇ ಪರಿವರ್ತನೆ ಸದ್ಯ. ಆ ಕೆಲಸ ಬಸವಣ್ಣನವರಿಂದ ಆಯುತು. ಆದರೆ ಅದರ ಬೀಜ ಬಿತ್ತಿದವರು ದೇವರ ದಾಸಿಮಯ್ಯ ಎಂದರು.
ತಹಶೀಲ್ದಾರ್ ಆರ್.ವಿ.ಕಟ್ಟಿ ಮಾತನಾಡಿ, ನೇಕಾರ ಸಮುದಾಯದ ದಾಸಿಮಯ್ಯ ಅವರು ಕರ್ನಾಟಕದಲ್ಲಿ ಮೊದಲಿಗೆ ವಚನ ಸಾಹಿತ್ಯ ಪ್ರಾರಂಭಿಸಿದ್ದವರು. ವಚನಗಳಿಂದಲೇ ಸಮಾಜದ ಓರೆಕೋರೆಗಳನ್ನು ತಿದ್ದಲು ಪ್ರಯತ್ನಿಸಿದ್ದರು. ಅವರ ಆದರ್ಶಗಳನ್ನೇ ಬಸವಣ್ಣನವರು ಮುಂದುವರೆಸಿ ಕ್ರಾಂತಿ ಮಾಡಿದರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ಕೆ.ಎಂ., ವಿವಿಧ ಶಾಲೆಯ ಮಕ್ಕಳು ಮತ್ತು ಸಿಬ್ಬಂದಿ ಇದ್ದರು.