ಹೊನ್ನಾವರ: ರೋಟರಿ ಕ್ಲಬ್, ಎಸ್.ಎನ್.ಐಯ್ಯರ್, ಐರಿನ್ ಅಯ್ಯರ್ ಚೆರಿಟಿ ಟ್ರಸ್ಟ್ ಮುಂಬಯಿ ಇವರ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಯಿತು.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು 170 ಜನರ ತಪಾಸಣೆಯನ್ನು ಮಾಡಲಾಯಿತು. ಇವರಲ್ಲಿ 38 ಜನರ ಉಚಿತ ಶಸ್ತ್ರ ಚಿಕಿತ್ಸೆಯನ್ನು ಉಡುಪಿ ಜಿಲ್ಲೆಯ ಅನಂತಜ್ಯೋತಿ ನೇತ್ರಾಲಯದ ಖ್ಯಾತ ವೈದ್ಯರಾದ ಡಾ. ನರೇಂದ್ರ ಶಣೈ ನೆರವೇರಿಸಿದರು. ಇದೇ ಬರುವ ಏ.30ರಂದು ಮರು ತಪಾಸಣೆ ನಡೆಯಲಿದ್ದು, ಅಂದೆ ಇನ್ನು 20 ಜನ ಫಲಾನುಭವಿಗಳ ಉಚಿತ ಶಸ್ತ್ರ ಚಿಕಿತ್ಸೆಯು ನಡೆಯಲಿದೆ ಎಂದು ರೋಟರಿ ಹೊನ್ನಾವರದ ಅಧ್ಯಕ್ಷರಾದ ಮಹೇಶ ಕಲ್ಯಾಣಪುರ ತಿಳಿಸಿದರು.
ಡಾ.ಕಿರಣ ಬಳ್ಕೂರರವರು ಇವೇಂಟ್‌ಮೆನ್ ಆಗಿ ಕಾರ್ಯ ನಿರ್ವಹಿಸಿದರು.
ದಿನೇಶ ಕಾಮತರವರು ಕಾರ್ಯಕ್ರಮದ ನಿರ್ವಹಿಸಿದರು. ಕಾರ್ಯದರ್ಶಿ ಡಾ.ಗಾಯತ್ರಿ ಗುನಗಾ ವಂದಿಸಿದರು. ಈ ಸಂದರ್ಭದಲ್ಲಿ ಸ್ಟಿಫನ್ ರೋಡ್ರಿಗೀಸ್, ದಿನೇಶ ಕಾಮತ, ರಂಗನಾಥ ಪೂಜಾರಿ, ಡಾ.ಆಶಿಕ್ ಹೆಗ್ಡೆ, ನಾರಾಯಣ ಯಾಜಿ, ದೀಪಕ ಲೋಪಿಸ್, ಎಸ್.ಎನ್.ಹೆಗ್ಡೆ, ಗಜಾನನ್ ಹೆಗ್ಡೆ, ಗಣೇಶ ಹೆಬ್ಬಾರ ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದರು.