ಸೆಕೆಂಡರಿ ಅಗ್ರಿಕಲ್ಚರ (Secondary Agriculture) (75%/10 ಲಕ್ಷ ರೂ ಸಹಾಯಧನ)
ಪಿ.ಎಮ್.ಎಫ್.ಎಮ್.ಇ (PMFME) (50%/15 ಲಕ್ಷ ರೂ ಸಹಾಯಧನ)
ಹಾಗೂ
ಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್ (AIF) (ಶೇ 3% ಬಡ್ಡಿ ವಿನಾಯಿತಿ)
ಯೋಜನೆಗಳ ಮಾಹಿತಿ ಕಾರ್ಯಗಾರ
ದಿನಾಂಕ:29-ಮಾರ್ಚ-2023
ಸಮಯ: ಮುಂಜಾನೆ 10:30 ರಿಂದ 2:0 ಗಂಟೆ
ಸ್ಥಳ: ಟಿ.ಆರ್.ಸಿ ಸಭಾ ಭವನ, ಎ.ಪಿ.ಎಮ್.ಸಿ. ಯಾರ್ಡ, ಶಿರಸಿ
- ಸೆಕೆಂಡರಿ ಅಗ್ರಿಕಲ್ಚರ ಯೋಜನೆ: ಅಡಿಕೆ ಹಾಳೆ ಪ್ಲೇಟ, ತೆಂಗಿನ ನಾರಿನ ಘಟಕ, ಕೊಕೊ ಪೀಟ್, ಬಿದಿರಿನ ಉಪ ಉತ್ಪನ್ನಗಳು, ಎರೆಹುಳು ಘಟಕ, ಸಾವಯವ ಗೊಬ್ಬರ ಘಟಕ, ಬಯೋಚಾರ ಘಟಕ, ಬಾಳೆ ಮತ್ತು ಇತರೆ ನಾರಿನ ಉತ್ಪನ್ನ, ನೈಸರ್ಗಿಕ ಬಣ್ಣ ತಯಾರಿಕೆ, ಬೆರಣಿ, ಬಸ್ಮ, ನೈಸರ್ಗಿಕ ಸೋಪ್, ಬೇವಿನ ಪುಡಿ ಮತ್ತು ಎಣ್ಣೆ ತಯಾರಿಕೆ, ನೈಸರ್ಗಿಕ ತೈಲ ಉತ್ಪಾದನೆ, ಬಿದಿರಿನ ನೇಯ್ಗೆ, ನೈಸರ್ಗಿಕ ಸೌಂಧರ್ಯವರ್ಧಕ, ಇತರೆ ಉತ್ಪನ್ನಗಳ ತಯಾರಿಕೆಗೆ ಅವಶ್ಯವಿರುವ ಯಂತ್ರೊಪಕರಣ ಖರೀದಿಗೆ ಶೇ 75% ಅಥವಾ ಗರಿಷ್ಟ 10 ಲಕ್ಷದ ವೆರೆಗೆ ಸಹಾಯಧನ.
- PMFME ಯೋಜನೆ: ಸಿಹಿ ಅಡಿಕೆ ಪುಡಿ , ಅಡಿಕೆ ಟೀ, ಅಡಿಕೆ ಫ್ಲೇಕ್ಸ್, ಅರಿಸಿನ ಹಿಟ್ಟು, ಕಾಳು ಮೆಣಸು ಹಿಟ್ಟು, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಕೋಕಂ ಜ್ಯುಸ್, ಉಪ್ಪಾಗೆ ತುಪ್ಪ, ಕಷಾಯ ಪುಡಿ, ಚಟ್ನಿ ಪುಡಿ, ಮಸಾಲ ಉತ್ಪನ್ನ, ಶೇಂಗಾ-ಸಾಸಿವೆ-ತೆಂಗಿನ ಎಣ್ಣೆ, ಬೇಕರಿ ಉತ್ಪನ್ನ, ಸುಕೇಳಿ, ಉಪ್ಪಿನಕಾಯಿ, ಹಪ್ಪಳ, ಜ್ಯಾಮ್, ಜ್ಯುಸ್, ಅಕ್ಕಿ-ಗೋದಿ-ರಾಗಿ-ಇತರೆ ಧಾನ್ಯಗಳ ಹಿಟ್ಟು, ಮೆಣಸಿನ ಹಿಟ್ಟು, ಶುಂಟಿ ಕ್ಯಾಂಡಿ, ಹಲಸು-ಬಾಳೆ-ಬಟಾಟೆ-ಗೆಣಸು-ಕೆಸುವಿನ ಚಿಪ್ಸ್, ಚಕ್ಕುಲಿ, ರೊಟ್ಟಿ, ಪರೋಟ, ಹೋಳಿಗೆ, ಚಾಕೊಲೇಟ್, ಲಸ್ಸಿ, ಪೇಡಾ, ಲಾಡು, ಚಿಕ್ಕಿ, ಹಲ್ವಾ, ತೊಡೆದೇವು, ಅತ್ರಸಾ, ಖಾರಾ, ಮಸಾಲ ಗೇರುಬೀಜ, ಸೂಪ್, ತೆಂಗಿನ ತುರಿ, ತೆಂಗಿನ ಹಾಲು, ಬೆಲ್ಲ, ಸಿರಿಧಾನ್ಯ, ಅಣಬೆ ಮತ್ತು ಜೇನು ತುಪ್ಪದ ಮೌಲ್ಯವರ್ಧನೆ, ಆರೋಗ್ಯ ಪೇಯ ಇತರೇ ಆಹಾರ ಉತ್ಪನ್ನ ತಯಾರಿಕಾ ಘಟಕಗಳ ಯಂತ್ರೊಪಕರಣ ಖರೀದಿಗೆ ಶೇ 50% ಅಥವಾ ಗರಿಷ್ಟ 15 ಲಕ್ಷದ ವೆರೆಗೆ ಸಹಾಯಧನ.
- ಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್ (AIF): ಗೋದಾಮು, ಪ್ಯಾಕ್ ಹೌಸ್, ಶೀಥಲ ಗೃಹ, ವಿಂಗಡಣೆ & ಶ್ರೇಣೀಕರಣ ಘಟಕ, ಸಾಗಾಣಿಕಾ ಸೌಲಭ್ಯ, ಪ್ರಾಥವಿಕ ಸಂಸ್ಕರಣೆ, ಹಣ್ಣು ಮಾಗಿಸುವ ಘಟಕ, ಮೌಲ್ಯಮಾಪನ ಘಟಕಗಳ ನಿರ್ಮಾಣಕ್ಕೆ ಗರಿಷ್ಟ 2.00 ಕೋಟಿ ಬ್ಯಾಂಕ ಸಾಲದ ನೆರವಿಗೆ ಗರಿಷ್ಟ ಶೇ. 6ರ ಬಡ್ಡಿ.
ಈ ಎಲ್ಲ ಯೋಜನೆಗಳನ್ನು ವೈಯಕ್ತಿಕ ರೈತರು, ರೈತ ಉತ್ಪಾದಕ ಕಂಪನಿ, ಕೃಷಿ ಉದ್ಯಮಿಗಳು, ಸ್ವ ಸಹಾಯ ಗುಂಪು, ವಿವಿಧೋಧ್ದೇಶ ಸಹಕಾರಿ ಸಂಘಗಳು, ಸಹಕಾರಿ ಸಂಸ್ಥೆ, ಖಾಸಗಿ ಸಂಸ್ಥೆ, ಇತರೆ ಸಂಸ್ಥೆಗಳು ಲಾಭ ಪಡೆಯಬಹುದಾಗಿದೆ
ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆಯ ಲಾಭ ಪಡೆಯಲು ಕೋರಿದೆ.
ಸರ್ವರಿಗೂ ಆದರದ ಸ್ವಾಗತ
ಉತ್ತರ ಕನ್ನಡ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿ ವೃಂದ