Slide
Slide
Slide
previous arrow
next arrow

ಶಿರಸಿ-ಸಿದ್ದಾಪುರ ಕ್ಷೇತ್ರದ ‘ಆಪ್’ ಅಭ್ಯರ್ಥಿಯಾಗಿ ‘ಹಿತೇಂದ್ರ ನಾಯ್ಕ್’ ಕಣಕ್ಕೆ

300x250 AD

ಶಿರಸಿ: ಪಕ್ಷದ ಮುಖ್ಯಸ್ಥರಾದ ಅರವಿಂದ ಕೇಜ್ರಿವಾಲ್ ಅವರು ನನ್ನ ಮೇಲೆ ನಂಬಿಕೆ ಇಟ್ಟು ಕ್ಷೇತ್ರದ ಟಿಕೆಟ್ ನೀಡಿದ್ದಾರೆ. ಯಾವುದೇ ಹಣ ಬಲ ಇಲ್ಲದೇ ವಿದ್ಯಾವಂತನಾದ ನಾನು ಸಾಮಾನ್ಯ ವ್ಯಕ್ತಿಯಾಗಿ ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದೇನೆ ಎಂದು ಕ್ಷೇತ್ರದ ಪಕ್ಷದ ಅಭ್ಯರ್ಥಿ ಹಿತೇಂದ್ರ ನಾಯ್ಕ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತತ್ವಾಧಾರಿತವಾಗಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಕಟಿಬದ್ಧರಾಗಿದ್ದು ನಮಗೆ ಜನ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ನನಗೆ ಯಾವ ಪಕ್ಷವೂ ಪ್ರತಿಸ್ಪರ್ಧಿಯಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅವುಗಳೇ ನನ್ನ ಪ್ರತಿಸ್ಪರ್ಧಿಗಳು. ಅವುಗಳನ್ನು ಬಗೆಹರಿಸುವುದೇ ಗುರಿಯಾಗಿದೆ. ಮುಖ್ಯವಾಗಿ ಚಿಕಿತ್ಸೆಗೆ ಶಿವಮೊಗ್ಗ, ಮಂಗಳೂರಿಗೆ ಜನ ಅಲೆಯವುದನ್ನು ತಪ್ಪಿಸುವುದು, ಉದ್ಯೋಗ ಹುಡುಕಿಕೊಂಡು ನಗರಕ್ಕೆ ವಲಸೆ ಹೋದವರನ್ನು ಪುನಃ ಊರಿಗೆ ಕರೆತಂದು ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು, ದುಡಿಯುವ ಹೆಣ್ಣುಮಕ್ಕಳಿಗೆ ಊರಿನಲ್ಲೇ ಉದ್ಯೋಗ ಒದಗಿಸುವುದು, ದುಶ್ಚಟದಿಂದ ದೂರ ಮಾಡುವುದು, ಅತಿಕ್ರಮಣದಾರರಿಗೆ ಹಕ್ಕು ನೀಡುವುದು, ನಗರ ಪ್ರದೇಶದಲ್ಲಿ ಎನ್‌ಎ ಆದ ಜಮೀನುಗಳಿಗೆ ಫಾರ್ಮ್ ನಂಬರ್ 3 ನೀಡುವುದು, ಭಾಗಯತಕ್ಕೆ ನೀಡಿದ ಬೆಟ್ಟದ ಪಹಣಿಯಲ್ಲಿ ಬ ಕರಾಬ್ ತೆಗೆದು ಭಾಗಯತದಾರರಿಗೆ ಅವರ ಹಕ್ಕನ್ನು ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.

300x250 AD

ಪಕ್ಷದ ಪದಾಧಿಕಾರಿಗಳಾದ ಮೋಹನ ಪಟಗಾರ, ಉಮಾಕಾಂತ ಗೌಡ, ಉಮೇಶ ನಾಯ್ಕ, ಸುಮಂಗಲಾ ನಾಯ್ಕ, ಮಹಮದ್ ಕಬೀರ್, ಗಣೇಶ ನಾಯ್ಕ, ಕಬೀರ ಮುಂತಾದವರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿರುವಂತೆ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲೂ 40% ಭ್ರಷ್ಟಾಚಾರ ಇದೆ. ಇದರಿಂದ ಕಳಪೆ ಕಾಮಗಾರಿ ಹೆಚ್ಚಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಆದರೆ ಕೊನೆಯಲ್ಲಿ ಗುದ್ದಲಿ ಹಾಗೂ ಹಾಕಿದ ಅಡಿಗಲ್ಲು ಮಾತ್ರ ಇರುವಂತಾಗಬಾರದು ಎಂದು ಹಿತೇಂದ್ರ ನಾಯ್ಕ ಲೇವಡಿ ಮಾಡಿದರು.

Share This
300x250 AD
300x250 AD
300x250 AD
Back to top