Slide
Slide
Slide
previous arrow
next arrow

ಪುರಸಭೆಯ ಪಕ್ಷಪಾತ ಧೋರಣೆ: ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ್ ಆಕ್ರೋಶ

300x250 AD

ಭಟ್ಕಳ: ಇಲ್ಲಿನ ಪುರಸಭೆಯು ರಂಜಾನ್ ಅಂಗಡಿ ಮಳಿಗೆಗಳನ್ನು ಲಕ್ಕಿ ಡ್ರಾ ಮೂಲಕ ಮಾಡುವ ವಿಚಾರದಲ್ಲಿ ಹಾಗೂ ಚೆನ್ನಪಟ್ಟಣ ಹನುಮಂತ ದೇವರ ಜಾತ್ರೆಯ ಅಂಗಡಿಗಳನ್ನು ಹರಾಜು ಮಾಡುತ್ತಿರುವ ವಿಚಾರದಲ್ಲಿ ಪುರಸಭೆ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಭಾಗದ ಶ್ರೀ ಹನುಮಂತ ದೇವರ ರಥೋತ್ಸವದ ಪ್ರಯುಕ್ತ ದೇವಸ್ಥಾನದ ಆವರಣದ ರಸ್ತೆ ಬದಿಯಲ್ಲಿ ಹಾಕುವ 9 ತಾತ್ಕಾಲಿಕ ಅಂಗಡಿಗಳ ಹರಾಜಿಗೆ ಸಂಬಂಧಿಸಿದ ಕಡತ ಹಾಗೂ ರಮ್ಜಾನ್ ಹಬ್ಬದ ಪ್ರಯುಕ್ತ ಹಾಕಲಾಗುವ 46 ತಾತ್ಕಾಲಿಕ ಅಂಗಡಿಗಳನ್ನು ಚೀಟಿ ಎತ್ತುವ ಮೂಲಕ ಅಂಗಡಿ ನೀಡುವ ಪ್ರತ್ಯೇಕ ಕಡತಗಳ ಕುರಿತು ನಡೆದ ಚರ್ಚೆಯಲ್ಲಿ, ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಅವರು ಒಂದು ಕಡೆ 9 ಅಂಗಡಿಗಳ ಹರಾಜು ಪ್ರಕ್ರಿಯೆ ಮಾಡುತ್ತೀರಾ? ಇನ್ನೊಂದು ಕಡೆ ಮಧ್ಯವರ್ತಿಗಳಿಗೆ ಲಾಭ ಮಾಡಿ ಕೊಡಲು 46 ಅಂಗಡಿಗಳನ್ನು ಲಕ್ಕಿ ಕೂಪನ್ ತರಹ ಚೀಟಿ ಹಾರಿಸಿ ಪ್ರತಿ ಅಂಗಡಿ 3000 ರೂಪಾಯಿಗೆ 15 ದಿನಗಳ ಕಾಲ ಅಂಗಡಿ ನೀಡುತ್ತಿರುವುದು ಯಾಕೆ? ರಂಜಾನ ಅಂಗಡಿ ಮಳಿಗೆಯ ವಿಚಾರದಲ್ಲಿಯೂ ಸಹ 46 ಅಂಗಡಿಗಳ ಹರಾಜು ಪ್ರಕ್ರಿಯೆ ಮಾಡುತ್ತಿಲ್ಲ ಯಾಕೆ? ಒಂದೊಮ್ಮೆ ಹರಾಜು ಪ್ರಕ್ರಿಯೆ ಮಾಡಿದಲ್ಲಿ, ಪುರಸಭೆಗೆ ಲಾಭವಾಗುವುದಲ್ಲದೇ, ನಿಜವಾದ ಬಡ ಅಂಗಡಿಕಾರರು ಅಂಗಡಿ ಪಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಚೀಟಿ ಹಾಕಿದಲ್ಲಿ, ಮಧ್ಯವರ್ತಿಗಳು ಚೀಟಿಯಲ್ಲಿ ಕೇವಲ 3000 ರೂಪಾಯಿಗೆ ಅಂಗಡಿ ಪಡೆದು ಅದನ್ನು 15 ರಿಂದ 20 ಸಾವಿರ ರೂಪಾಯಿವರೆಗೆ ಬೇರೆಯವರಿಗೆ ನೀಡುವುದರಿಂದ, ಮಧ್ಯವರ್ತಿಗಳ ಸಂಪಾದನೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ವಿಷಯ ಗಮನದಲ್ಲಿದ್ದರೂ ಸಹ ಲಕ್ಷಾಂತರ ರೂಪಾಯಿ ಪುರಸಭೆಗೆ ಹಾಗೂ ನೈಜ ಅಂಗಡಿಯವರಿಗೆ ಆರ್ಥಿಕ ನಷ್ಟ ಮಾಡಿ, ಚೀಟಿ ಹಾರಿಸಿ ಅಂಗಡಿ ನೀಡುವ ಬಗ್ಗೆ ಹೆಚ್ಚು ಆಸಕ್ತಿ, ಹಠ ಯಾಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪುರಸಭೆ ಅಧ್ಯಕ್ಷರು ಉತ್ತರಿಸುತ್ತಾ, ಇದು ಮೊದಲಿನಿಂದಲೂ ರೂಢಿಯಲ್ಲಿರುವುದರಿಂದ ಇದನ್ನೇ ಮುಂದುವರೆಸಲಾಗುವುದು ಎಂದು ಹಾರಿಕೆಯ ಉತ್ತರ ನೀಡಿದ್ದು ಇದನ್ನು ಖಂಡಿಸಿದ ಅವರು ಹಾಗಾದರೆ ಈ ಮೊದಲಿನ ತಪ್ಪು ನಡೆಯಿಂದ ಪುರಸಭೆಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರೂ ಯಾಕೆ ಅದನ್ನು ಸರಿಪಡಿಸಬಾರದು ಎಂಬ ಪ್ರಶ್ನೆಗೆ, ಪುರಸಭೆ ಯಲ್ಲಿ ಇನ್ನೊಂದು ಕೋವಿನ ಸದಸ್ಯರ ಏಕಪಕ್ಷೀಯ ಅಭಿಪ್ರಾಯಕ್ಕೆ ಮಣೆ ಹಾಕುವ ಮೂಲಕ ಪುರಸಭೆಗೆ ಲಕ್ಷಾಂತರ ರೂಪಾಯಿ ಆರ್ಥಿಕ ನಷ್ಟ ಹಾಗೂ ನೈಜ ಅಂಗಡಿಕಾರರಿಗಾಗುವ ಅನ್ಯಾಯ ಎರಡನ್ನು ನಿರ್ಲಕ್ಷಿಸಿ, ಚೀಟಿ ಹಾರಿಸಿ ಲಕ್ಕಿ ಕೂಪನ್ ಮೂಲಕ ಅಂಗಡಿ ನೀಡಲು ತೀರ್ಮಾನಿಸಿ ಮತ್ತೊಮ್ಮೆ ಪುರಸಭೆ ಒಂದು ಕೋಮಿನ ನಿರ್ಧಾರಕ್ಕೆ ಬದ್ಧವಾಗಿದೆ ಎನ್ನುವುದನ್ನು ಸಾಬೀತುಪಡಿಸಿದಂತಾಗಲಿದೆ ಎಂಬುದು ಶ್ರೀಕಾಂತ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top