• Slide
    Slide
    Slide
    previous arrow
    next arrow
  • ಕಾರವಾರ, ಅಂಕೋಲಾವನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ: ರೂಪಾಲಿ ನಾಯ್ಕ

    300x250 AD

    ಕಾರವಾರ: ಕಾರವಾರ ಹಾಗೂ ಅಂಕೋಲಾ ಎರಡೂ ನಗರಗಳು ರಾಜ್ಯದಲ್ಲಿಯೇ ಮಾದರಿ ಆಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

    ಅವರು ಕಾರವಾರ ಹಾಗೂ ಅಂಕೋಲಾದ ವಿವಿಧೆಡೆ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಾರವಾರ ಹಾಗೂ ಅಂಕೋಲಾ ಎರಡೂ ನಗರಗಳು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿವೆ. ನಾನು ಶಾಸಕಳಾದ ಮೇಲೆ ಇಷ್ಟೊಂದು ಅಭಿವೃದ್ಧಿ ಆಗುತ್ತಿರುವುದು ಸಂತಸ ಹಾಗೂ ಸಮಾಧಾನಕ್ಕೆ ಕಾರಣವಾಗಿದೆ. ಈ ಎರಡು ನಗರಗಳು ರಾಜ್ಯದಲ್ಲಿಯೇ ಮಾದರಿ ನಗರಗಳಾಗಬೇಕು ಎನ್ನುವುದು ನನ್ನ ಆಸೆಯಾಗಿದೆ. ಇದಕ್ಕಾಗಿ ಶಕ್ತಿಮೀರಿ ಪ್ರಯತ್ನಿಸಿ ಅನುದಾನವನ್ನು ತಂದು ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದರು.
    ಜಲಮೂಲವಾದ ಕೆರೆಗಳ ಸಂರಕ್ಷಣೆ, ಕೆರೆಗಳಿಗೆ ಕಾಯಕಲ್ಪ ನೀಡುವುದು ನನ್ನ ಕನಸಾಗಿದ್ದು, ಆ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇನೆ. ಕಾರವಾರದ ರಾಘವೇಂದ್ರ ಮಠದ ಕೆರೆ ಅಭಿವೃದ್ಧಿ, ಬಿಣಗಾ ಕೆರೆ ಅಭಿವೃದ್ಧಿ, ಸಾಲು ಮರದ ತಿಮ್ಮಕ್ಕ ಉದ್ಯಾನದಲ್ಲಿ ಕೆರೆ ಅಭಿವೃದ್ಧಿ, ಅಂಕೋಲಾದ ಲಕ್ಷ್ಮೇಶ್ವರ ಕೆರೆ ಅಭಿವೃದ್ಧಿ ಹಾಗೂ ಮತ್ತಿತರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.
    ಖಾರ್ಲ್ಯಾಂಡ್ ತಡೆಗೋಡೆ ನಿರ್ಮಾಣ, ರಸ್ತೆ, ಕಟ್ಟಡ ನಿರ್ಮಾಣ ಸೇರಿದಂತೆ ಈ ಎರಡೂ ತಾಲೂಕುಗಳಲ್ಲಿ ಗುರುವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಭಿವೃದ್ಧಿ ನಿರಂತರವಾಗಿ ಇರಲಿದೆ. ಕ್ಷೇತ್ರ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. 
    ಕೇವಲ ಕಾರವಾರ ಹಾಗೂ ಅಂಕೋಲಾ ನಗರಗಳಷ್ಟೇ ಅಲ್ಲ. ಎರಡೂ ತಾಲೂಕುಗಳ ಹಳ್ಳಿ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ ಎಂಬ ಕೊರಗು ಯಾರಿಗೂ ಇರಬಾರದು. ಹೀಗಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದೇನೆ ಎಂದು ಅವರು ವಿವರಿಸಿದರು.
    ನಗರ ಸ್ಥಳೀಯ ಸಂಸ್ಥೆ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಪದಾಧಿಕಾರಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top