• Slide
  Slide
  Slide
  previous arrow
  next arrow
 • ಗಾಂವಠಾಣ ಪ್ಲಾಟ್‌ಗಳಿಗೆ ಹಕ್ಕು ಪತ್ರ ನೀಡಲು ಆಗ್ರಹ

  300x250 AD

  ಕಾರವಾರ: ಗೋಕರ್ಣ ಜನತಾ ಕಾಲೋನಿಯಲ್ಲಿ ಹಿಂದುಳಿದ ಪರಿಶಿಷ್ಟ ಜಾತಿಯವರಿಗೆ ಸಂಬಂಧಿಸಿದಂತೆ ನೀಡಲಾದ ಗಾಂವಠಾಣ ಪ್ಲಾಟ್‌ಗಳಿಗೆ ಹಕ್ಕು ಪತ್ರ ನೀಡುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಆಗ್ರಹಿಸಿದ್ದಾರೆ.

  ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947ರ ಸ್ವಾತಂತ್ರ‍್ಯದ ಬಳಿಕ 1950ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಸಿದ್ದರು. ಆದರೂ ಈವರೆಗೂ ಸರ್ಕಾರಗಳು ದಲಿತರಿಗೆ ಅವರ ಹಕ್ಕುಗಳನ್ನು ಸಮರ್ಪಕವಾಗಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  300x250 AD

  ಗೋಕರ್ಣ ಸಣ್ಣ ಬಿಜೂರಿನ ಸರ್ವೆ ನಂಬರ್ 283ರಲ್ಲಿ ಸರ್ಕಾರ ಗಾಂವಠಾಣ ಪ್ಲಾಟ್ ಗಳನ್ನು 1973ರಲ್ಲಿ ವಿಂಗಡಿಸಿ, ಪರಿಶಿಷ್ಟ ಜಾತಿಯ ಜನರಿಗೆ ವಾಸ್ತವ್ಯಕ್ಕೆ ಕಬ್ಜ ನೀಡಿ ಕೇವಲ ಹಕ್ಕು ಪತ್ರಗಳನ್ನ ನೀಡಲಾಗಿದೆ. ಆದರೆ ಈವರೆಗೂ ಪಹಣಿ ಪತ್ರಿಕೆಯ ಕಾಲಂ ನಂಬರ್ 9ರಲ್ಲಿ ವಾಸ್ತವ್ಯದಾರರ ಹೆಸರುಗಳನ್ನು ದಾಖಲಿಸುವ ಕಾರ್ಯವಾಗಿಲ್ಲ. ಇದರಿಂದಾಗಿ ಸರ್ಕಾರಿ ಸೌಲಭ್ಯ ಪಡೆಯಲು ಹಿನ್ನಡೆಯಾಗಿದ್ದು, ಶೀಘ್ರದಲ್ಲೇ ಕಾಲಂ ನಂಬರ್ 9ರಲ್ಲಿ ಹೆಸರು ನೋಂದಾಯಿಸಿ ಪಟ್ಟಾ ವಿತರಣೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
  ಪತ್ರಿಕಾಗೋಷ್ಠಿಯಲ್ಲಿ ಸಣ್ಣಬಿಜೂರು ಜನತಾ ಕಾಲೋನಿಯ ನಿವಾಸಿಗಳಾದ ನಾಗು ಹಳ್ಳೇರ, ಮಾಸ್ತಿ ಹಳ್ಳೇರ, ಸುಮಿತ್ರ ಹಳ್ಳೇರ, ನಾರಾಯಣ್ ಮೇಸ್ತ, ನಾಗರಾಜ್ ಸೋಲಂಕಿ, ಜ್ಯೋತಿ ಆಚಾರಿ ಇದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top