• Slide
  Slide
  Slide
  previous arrow
  next arrow
 • ಸಿ-20 ಸಮ್ಮೇಳನದಲ್ಲಿ ಭಾಗವಹಿಸಿದ ಡಾ. ವೆಂಕಟೇಶ ನಾಯ್ಕ್: ಭವ್ಯ ಸ್ವಾಗತ, ನಾಗರಿಕ ಸನ್ಮಾನ

  300x250 AD

  ಶಿರಸಿ: ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ 03 ದಿನಗಳ ಜಿ20 ರಾಷ್ಟ್ರಗಳ ಸಿ20 ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಆಗಮಿಸಿದ ಡಾ. ವೆಂಕಟೇಶ ನಾಯ್ಕರನ್ನು ನಗರ ಪ್ರವೇಶದಲ್ಲಿ ಶಿರಸಿ ನಗರ ಸಭೆಯ ಅಧ್ಯಕ್ಷರೂ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಂಘ ಸಂಸ್ಥೆಯ ಪ್ರಮುಖರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.

  ನಗರದ ಸಾರ್ವಜನಿಕರ ಪರವಾಗಿ ಅಭಿನಂದಿಸಿದ ನಗರ ಸಭೆಯ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಜಿ20 ಸಮೂಹ ರಾಷ್ಟ್ರಗಳ ವೇದಿಕೆಯಲ್ಲಿ ನಡೆದ 20 ದೇಶಗಳ ಸಿವಿಲ್ ಸೊಸೈಟಿ ಸಮೂಹ ಸಂಸ್ಥೆಗಳ ಸಿ20 ಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ ನಾಯ್ಕರಿಗೆ ಅವಕಾಶ ಸಿಕ್ಕಿರುವುದು ನಮ್ಮ ಇಡೀ ಜಿಲ್ಲೆ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.

  ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವೆಂಕಟೇಶ ನಾಯ್ಕ, ಅಂತರ ರಾಷ್ಟ್ರೀಯ ಮಟ್ಟದ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಸಿವಿಲ್ ಸೊಸೈಟಿಗಳ ಧೋರಣೆಗಳು ಹಾಗೂ ಅನುಭವಗಳನ್ನು ಪ್ರಸ್ತಾಪಿಸಲು ಆಯೋಜಿಸಲಾಗಿದ್ದ ಸಿ20 ಸಮ್ಮೇಳನದ ಆಶಯ ಮತ್ತು ಅನುಭವಗಳನ್ನು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ತಜ್ಞರೊಂದಿಗೆ ಶೀಘ್ರವೇ ಸಮಾಲೋಚನೆ ನಡೆಸುತ್ತೇನೆ ಎಂದರು.

  300x250 AD

  ಇದೇ ಸಂದರ್ಭದಲ್ಲಿ ಉದ್ಯಮಿ ಹಾಗೂ ತಾಲೂಕು ಆರ್ಯ ಈಡಿಗ ಹಿಂದೂ ನಾಮಧಾರಿ ಸಂಘದ ಅಧ್ಯಕ್ಷ ಭೀಮಣ್ಣ ನಾಯ್ಕ, ಉದ್ಯಮಿ ಹಾಗೂ ಸಮಾಜ ಸೇವಕ ಉಪೇಂದ್ರ ಪೈ, ಪ್ರೊಫೆಸರ್ ನಾಗೇಶ ನಾಯ್ಕ, ಉದ್ಯಮಿ ಕಿರಣ ಚಿತ್ರಕಾರ, ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ಹೆಗಡೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶೋಭಾ ನಾಯ್ಕ, ಶಿಲ್ಪಾ ಭಾಸ್ಕರ, ಕುಂಬ್ರಿ ಮರಾಠಿ ಸಮುದಾಯದ ಪ್ರಮುಖರಾದ ನಾರಾಯಣ ಮರಾಠಿ, ಶಿರಸಿ ನಗರ ಆರ್ಯ ಈಡಿಗ ಹಿಂದೂ ನಾಮಧಾರಿ ಸಂಘದ ಅಧ್ಯಕ್ಷ ದೇವಿಕೆರೆ ಗಣಪತಿ ನಾಯ್ಕ, ಸ್ಕೊಡ್‌ವೆಸ್ ಸಂಸ್ಥೆಯ ಉಪಾಧ್ಯಕ್ಷ ಕುಮಾರ ವಿ ಕೂರ್ಸೆ, ನಿರ್ದೇಶಕರಾದ ವಸಂತ ಹಾದಿಮನೆ, ಪ್ರೋ. ಕೆ.ಎನ್ ಹೊಸಮನಿ, ವಕೀಲರಾದ ದಯಾನಂದ ಅಗಾಸೆ, ಸಂಸ್ಥೆಯ ಹಣಕಾಸು ಮತ್ತು ಆಡಳಿತಾಧಿಕರಿಗಳಾದ ಸರಸ್ವತಿ ಎನ್. ರವಿ, ಗ್ರಾಮೀಣ ಪ್ರದೇಶದಿಂದ ಬಂದ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಸನ್ಮಾನಿಸಿದರು.
  ಈ ಸಂದರ್ಭದಲ್ಲಿ ಶಿರಸಿ ತಾಲೂಕು ತಾಲೂಕು ಆರ್ಯ ಈಡಿಗ ಹಿಂದೂ ನಾಮಧಾರಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಹಾಗೂ ಪದಾಧಿಕಾರಿಗಳು ಬೃಹ್ಮಶ್ರೀ ನಾರಾಯಣ ಗುರು ವೆಲ್‌ಫೇರ್ ಟ್ರಸ್ಟ್ನ ಕಿರಣ ನಾಯ್ಕ, ಪ್ರಮುಖರು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು.
  ಕೊನೆಯಲ್ಲಿ ಶಿರಸಿ ನಗರದ ಪ್ರವೇಶ ದ್ವಾರದಿಂದ ಸ್ಕೊಡ್‌ವೆಸ್ ಸಂಸ್ಥೆಯ ಕಛೇರಿಯವರೆಗೆ ಬೈಕ್ ರ‍್ಯಾಲಿ ಮೂಲಕ ಡಾ. ವೆಂಕಟೇಶ ನಾಯ್ಕರವರನ್ನು ಕರೆತರಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top