ಶಿರಸಿ: ನಗರದ ಮಧುವನ ಆರಾಧನಾ ಸಭಾಂಗಣದಲ್ಲಿ ಶಿರಸಿಯ ಕವಿಕಾವ್ಯ ಬಳಗದ ಹದಿನೈದನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.31, ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಆಯೋಜಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕನ್ನಡ ಉಪನ್ಯಾಸಕಿ ಡಾ. ವಿಜಯನಳಿನಿ ರಮೇಶ್ ವಹಿಸಲಿದ್ದು, ಉದ್ಘಾಟಕರಾಗಿ ಹಿರಿಯ ಕವಿ ಹಾಗೂ ನಿವೃತ್ತ ಪ್ರಾಧ್ಯಾಪಕ ಎಚ್.ಆರ್.ಅಮರನಾಥ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಶಿವಲೀಲಾ ಹುಣಸಗಿ ಉಪಸ್ಥಿತರಿರಲಿದ್ದಾರೆ.
ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಜಿ.ವಿ.ಕೊಪ್ಪಲತೋಟ ವಹಿಸಲಿದ್ದು, ಖ್ಯಾತ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಆಶಯ ಭಾಷಣವನ್ನು ಮಾಡಲಿದ್ದಾರೆ.
ಮಧ್ಯಾಹ್ನದ ನಂತರ ‘ಸ್ವಾರಸ್ಯಕರ ನೈಜ ಘಟನೆಗಳು’ ವಿಷಯದ ಮೇಲೆ ಸಂವಾದ ಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಖ್ಯಾತ ಬರಹಗಾರ್ತಿ ಮಾಧವಿ ಭಂಡಾರಿ ವಹಿಸಲಿದ್ದಾರೆ.
ಸಂಜೆ 4 ಗಂಟೆಯಿಂದ ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು ಹಿರಿಯ ಕವಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ವನರಾಗ ಶರ್ಮಾ ವಜ್ರಳ್ಳಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅಧ್ಯಕ್ಷರಾಗಿ ಹಿರಿಯ ಸಾಹಿತಿ ಭಾಗೀರಥಿ ಹೆಗಡೆ, ಹಿರಿಯ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಗೌರವ ಉಪಸ್ಥಿತಿ ನೀಡಲಿದ್ದಾರೆ. ಅಭಿನಂದನಾ ಭಾಷಣವನ್ನು ವಿಶ್ವದರ್ಶನ ಕಾಲೇಜು ಪ್ರಾಂಶುಪಾಲ ಡಾ.ಡಿ.ಕೆ.ಗಾಂವ್ಕರ್ ನುಡಿಯಲಿದ್ದಾರೆ.
ಎಲ್ಲಾ ಕಾರ್ಯಕ್ರಮಗಳಿಗೂ ಸರ್ವರೂ ಆಗಮಿಸಿ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.