• Slide
    Slide
    Slide
    previous arrow
    next arrow
  • ಲಕ್ಕಿ ಡ್ರಾ ವಿಜೇತರಿಗೆ ಆಕರ್ಷಕ ಬಹುಮಾನ ವಿತರಣೆ

    300x250 AD

    ಶಿರಸಿ: ಡೆವಲಪಮೆಂಟ್ ಸೊಸೈಟಿ ಹಾಗೂ ಲಕ್ಷ್ಮೀ ಟ್ರೇಡ್ ಲಿಂಕ್ ಅವರ ಸಹಯೋಗದಲ್ಲಿ ಡೆವಲಪಮೆಂಟ್ ಪೆಟ್ರೋಲ್ ಬಂಕಿನಲ್ಲಿ ಸಂಕ್ರಾಂತಿಯಿಂದ ಯುಗಾದಿ ತನಕ ನಡೆಸಲಾದ ಕಾರಿಗೆ 2000 ರೂ., ಬೈಕಿಗೆ 600 ರೂ ಪೆಟ್ರೋಲ್ ತುಂಬಿಸಿಕೊಂಡವರಿಗೆ ನೀಡಲಾದ ಲಕ್ಕಿ ಡ್ರಾ ಕೂಪನ್ನಲ್ಲಿ ಬಹುಮಾನದ ಚೀಟಿ ಎತ್ತುವ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

    ವಿಜೇತರಿಗಾಗಿ ಫ್ರಿಡ್ಜ್, ಟಿವಿ, ಮಿಕ್ಸರ್, ಬ್ಯಾಟರಿ ಕೂಡ ಆಕರ್ಷಕ ಬಹುಮಾನ ಇಡಲಾಗಿದ್ದು ಗುರುವಾರದಂದು ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಲಕ್ಷ್ಮೀ ಟ್ರೇಡ್ ಲಿಂಕ್ ನ ನಿತಿನ್ ಕಾಸರಕೋಡ ಅದೃಷ್ಟ ಶಾಲಿಗಳನ್ನು ಸಾರ್ವಜನಿಕವಾಗಿ ಆಯ್ಕೆ ಮಾಡಿದರು.

    ಬೈಕ್ ವಿಭಾಗದಲ್ಲಿ ಪ್ರಥಮ ಬಹುಮಾನ ಮಹೇಶ ನಾಯ್ಕ ಶ್ರೀನಗರ ಶಿರಸಿ,
    ದ್ವಿತೀಯ ಬಹುಮಾನ ಭಾಸ್ಕರ ಜಿ.ಹೆಗಡೆ ಹೊಳ್ಳಾಡೆ ಪಡೆದರೆ, ಕಾರಿನ ವಿಭಾಗದಲ್ಲಿ ಗುರುರಾಜ ಆರ್. ರಾಯಕರ ಶಿರಸಿ ಪ್ರಥಮ ಬಹುಮಾನ ಹಾಗೂ ದ್ವಿತೀಯ ಬಹುಮಾನ ಕೆ.ಎಸ್.ಹಿರೇಮಠ ಮಾವಿನಕಟ್ಟಾ ದ್ವಿತೀಯ ಬಹುಮಾನ ಪಡೆದರು.
    ಎರಡೂ ವಿಭಾಗದಲ್ಲಿ ತಲಾ 50 ಲಕ್ಕಿಡಿಪ್ ನಲ್ಲಿ ಆಯ್ಕೆಯಾದ ಗ್ರಾಹಕರಿಗೆ ಬ್ಯಾಟರಿಗಳನ್ನು ಪ್ರೋತ್ಸಾಹಕವಾಗಿ ನೀಡಲಾಯಿತು.

    300x250 AD

    ಈ ವೇಳೆ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ಹೆಗಡೆ, ಉಪಾಧ್ಯಕ್ಷ ಐ.ಎಂ.ಹೆಗಡೆ, ನಿರ್ದೇಶಕರಾದ ಗಣಪತಿ ವೆಂ.ಜೋಶಿ ಕೊಪ್ಪಲತೋಟ, ಜಿ.ಆರ್.ಹೆಗಡೆ ಬೆಳ್ಳೇಕೇರಿ, ಗ್ರಾಹಕ ಎಂ.ಕೆ.ಹೆಗಡೆ ಗೋಳಿಕೊಪ್ಪ, ಇಂಧನ ವಿಭಾಗದ ಮುಖ್ಯಸ್ಥ ಶ್ರೀಧರ ಹೆಗಡೆ ಅರಸಿಕೆರೆ, ಕೃಷಿ ತಜ್ಞ ವಿ.ಎಂ.ಹೆಗಡೆ ಶಿಂಗನಮನೆ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top