Slide
Slide
Slide
previous arrow
next arrow

ಮಾ.23 ವಿಶ್ವ ಹವಾಮಾನ ದಿನಾಚರಣೆ

300x250 AD

(World Meteorological Day):ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಪರೀತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್‌ 23ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ.
ಹವಾಮಾನ ಕ್ಷಣ ಕ್ಷಣಕ್ಕೆ ಬದಲಾಗುವುದರಿಂದ ಪ್ರತಿ ದೇಶವು ಹವಾಮಾನ ವರದಿಗಳಿಗೆ ತುಂಬಾ ಆದ್ಯತೆಯನ್ನು ನೀಡುತ್ತವೆ. ಭಾರತದಲ್ಲಿ ಆಯಾ ಹವಾಮಾನವನ್ನು ಅವಲಂಬಿಸಿ ವಿವಿಧ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಹವಾಮಾನಕ್ಕೆ ಇರುವ ಈ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಆ ದಿನವೇ ಮಾರ್ಚ್‌ 23. ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಒಂದೊಂದು ಥೀಮ್‌ನಡಿಯಲ್ಲಿ ಈ ದಿನವನ್ನು ಸೆಲೆಬ್ರೇಟ್‌ ಮಾಡಲಾಗುತ್ತದೆ. ಈ ವರ್ಷದ ಥೀಮ್‌ ‘ ಸೂರ್ಯ, ಭೂಮಿ ಮತ್ತು ಹವಾಮಾನ’ ಎಂಬುದಾಗಿದೆ. ಹವಾಮಾನ ನಿರ್ಧರಿಸುವಲ್ಲಿ ಮೋಡಗಳ ಪಾತ್ರ ಮಹತ್ವದ್ದು ಹಾಗೂ ಇದರ ಅಧ್ಯಯನ ನಡೆಸುವ ಅಗತ್ಯತೆಯನ್ನು ಈ ದಿನ ಪ್ರತಿಪಾದಿಸುತ್ತದೆ.
ಹಿನ್ನೆಲೆ:
1950ರ ಮಾರ್ಚ್‌ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು. ವಿಶ್ವ ಹವಾಮಾನ ಸಂಸ್ಥೆಯು 1950 ಮಾರ್ಚ್‌ 23ರಂದು ಈ ದಿನಾಚರಣೆಯನ್ನು ಆರಂಭಿಸಿತು.ಜನರ ಸುರಕ್ಷೆ ಮತ್ತು ಕ್ಷೇಮಕ್ಕೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವದ್ದು ಎಂಬುದನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂಸ್ಥೆಯು ಹವಾಮಾನ, ಭೌಗೋಳಿಕ ವಿಜ್ಞಾನ ಹಾಗೂ ಆಪರೇಷನಲ್‌ ಹೈಡ್ರಾಲಜಿ ವಿಷಯಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಉದ್ದೇಶ:
ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯಗಳ ಬಗ್ಗೆ ಅರಿವು ಮೂಡಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ.ಹವಾಮಾನ ವಿಧಾನ ಹಾಗೂ ಈಗ ಆಗಿರುವ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಲಿದೆ. ಅಧಿಧಿಕ ಬಿಸಿಗಾಳಿ, ಬರ ಪರಿಸ್ಥಿತಿ ಹಾಗೂ ಅತಿವೃಷ್ಟಿ , ಭೂಕಂಪನ, ಅಗ್ನಿ ಪರ್ವತಗಳ ಸ್ಫೋಟ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
ಹವಾಮಾನ ವೈಪರೀತ್ಯ:
ಹವಾಮಾನ ವೈಪರೀತ್ಯವು ನಿಸರ್ಗ ಸಹಜ ಪ್ರಕ್ರಿಯೆಯೇ ಹೊರತು ಮನುಷ್ಯ ಸೃಷ್ಟಿಯಲ್ಲ. ಈ ಭೂಮಿಯಲ್ಲಿ ಹವಾಮಾನ ವೈಪರೀತ್ಯವು ಮನುಷ್ಯ ಸೃಷ್ಟಿಗೆ ಮುನ್ನವೇ ಎಷ್ಟೋ ಸಲ ಸಂಭವಿಸಿದೆ. ಭೂಮಿಯ ಮೇಲಿನ ಅತ್ಯಧಿಧಿಕ ತಾಪಮಾನದಿಂದಾಗಿ 6. 5 ಕೋಟಿ ವರ್ಷಗಳ ಹಿಂದೆ ಜೀವ ವೈವಿಧ್ಯವೆಲ್ಲಾ ನಾಶವಾಗಿದ್ದೇ ಇದಕ್ಕೆ ನಿದರ್ಶನ ಎಂದು ಹೇಳಲಾಗುತ್ತದೆ. ಡಾರ್ವಿನ್‌ರ ವಿಕಾಸವಾದದ ಮುಖ್ಯ ಸೂತ್ರಗಳಾದ ಅಸ್ತಿತ್ವಕ್ಕಾಗಿ ಸೆಣಸಾಟ, ಸದೃಢರ ಉಳಿವು ಮತ್ತು ಸಹಜ ಆಯ್ಕೆ ಎಲ್ಲವೂ ಹವಾಮಾನದೊಂದಿಗೆ ಬೆಸೆದುಕೊಂಡಿದೆ. ಹವಾಮಾನ ಬದಲಾದಂತೆ ಪ್ರಾಣಿ, ಪಕ್ಷಿ, ಗಿಡಗಳು ಅಳಿವಿನತ್ತ ಸಾಗುತ್ತಾ ಮುಂದೊಂದು ದಿನ ಕಣ್ಮರೆಯಾಗುತ್ತವೆ. ಜತೆಗೆ ಮಾನವನ ದುರಾಸೆಯ ಫಲವಾಗಿ ಹೆಚ್ಚುತ್ತಿರುವ ಕೈಗಾರಿಕೋದ್ಯಮ, ಅರಣ್ಯ ನಾಶ ಹೀಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಸಮತೋಲನವನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆ.
Today commemorates the establishment of World Meteorological Organisation. On this day let us emphasise on the importance of earth’s atmosphere and it’s properties in sustaining life.
Let us pledge to preserve and conserve our ocean, our climate, and the weather.

300x250 AD

WorldMeteorologicalDay

Share This
300x250 AD
300x250 AD
300x250 AD
Back to top