• Slide
    Slide
    Slide
    previous arrow
    next arrow
  • ವಿಕಲಾಂಗರಿಗೆ ಸರ್ಕಾರದ ಯೋಜನೆಗಳಿಂದ ಚೈತನ್ಯ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

    300x250 AD

    ಕಾರವಾರ: ಸರ್ಕಾರದ ಯೋಜನೆ ಎಲ್ಲರಿಗೂ ಸರಿಸಮಾನರಾಗಿ ನೋಡುತ್ತದೆ. ಯಾವುದೇ ನ್ಯೂನ್ಯತೆಯಿಂದ ಇರುವವರಿಗೆ ಸರ್ಕಾರ ಇಂತಹ ಯೋಜನೆ ಮೂಲಕ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ನಗರಸಭೆಯ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2022- 23ನೇ ಸಾಲಿನ ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಒದಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಯಾವುದೇ ದಿವ್ಯಾಂಗರು ಸರ್ಕಾರದ ಸಿಂಪತಿ ಪಡೆಯುವುದಿಲ್ಲ. ಸರ್ಕಾರದ ಯೋಜನೆ ಸದುಪಯೋಗ ಮಾಡಿಕೊಂಡು, ಅವರ ಸಾಧನೆ ಜಗತ್ತಿಗೆ ತೋರಿಸುವ ಛಲ ಅವರಿಗೆ ಇರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ನೋಡಿದಾಗ, ದಿವ್ಯಾಂಗರಿಗೆ ನಡೆಸುವ ಒಲಂಪಿಕ್‌ನಲ್ಲಿ ದೇಶದವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಎಲರೂ ತಮ್ಮಲ್ಲಿನ ಪ್ರತಿಭೆಯನ್ನ ಹೊರತರಲಿ ಎಂದ ಅವರು, ತ್ರಿಚಕ್ರ ವಾಹನ ದಿವ್ಯಾಂಗರ ಆರ್ಥಿಕ ಚಟುವಟಿಕೆ ವೃದ್ಧಿ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ, ಅಂಗವಿಕಲರಿಗೆ ವಾಹನ ನೀಡುವುದು ಖುಷಿ ನೀಡುತ್ತಿದೆ. ಅಂಗವಿಕರಲು ಕಾಣಲಿಕ್ಕೆ ಮಾತ್ರ ಅಂಗವಿಕಲರು. ಆದರೆ ಅವರಲ್ಲಿ ಎಲ್ಲರಿಗಿಂತ ಹೆಚ್ಚು ಪ್ರತಿಭೆ ಇರುತ್ತದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿವ್ಯಾಂಗರ ಅಭಿವೃದ್ಧಿಗೆ ನಾನಾ ಕಾರ್ಯಕ್ರಮ ಮಾಡಿದೆ. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

    300x250 AD

    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪಿ.ಪಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ್ ಬಾಂದೇಕರ್, ಜಿಲ್ಲಾ ವಿಕಲಚೇತನ ಇಲಾಕೆ ಕಲ್ಯಾಣಾಧಿಕಾರಿ ಅರುಣ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top