ಶಿರಸಿ: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆ ಕಟ್ಟಿಕೊಡುತ್ತದೆ ಎಂದು ಹಾಸ್ಯ ಚಕ್ರವರ್ತಿ, ಅಭಿನವ ಬೀಚಿ ಎಂದೇ ಪ್ರಸಿದ್ಧರಾದ ಗಂಗಾವತಿ ಪ್ರಾಣೇಶ ಬಣ್ಣಿಸಿದರು.
ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ ಹಾಸ್ಯ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಆಂಗ್ಲ ಭಾಷೆ ಎಂಬುದು ಭಾವ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಕಟ್ಟಿ ಕೊಡುವದಿಲ್ಲ ಎಂದ ಅವರು, ಮಕ್ಕಳಿಗೆ ಶುದ್ಧ ಕನ್ನಡ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ ಎಂದರು.
ಕನ್ನಡದಲ್ಲಿ ಪ್ರಾಂತೀಯ ಭಾಷೆಗಳು ಸಾಕಷ್ಟು ಸಿಗುತ್ತವೆ. ಕನ್ನಡದಲ್ಲಿ ಎಷ್ಟೊಂದ ಶಬ್ದಗಳಿವೆ ಎಂದು ವಿವರಿಸಿ ಮಾತನಾಡಿದ ಪ್ರಾಣೇಶ್,
ಶುದ್ಧ ಹವೆ, ಒಳ್ಳೆಯ ಪರಿಸರ ಜೊತೆ ಶುದ್ಧ ಆಹಾರ ಕೂಡ ಬಳಸಬೇಕು. ನಿಸರ್ಗಮನೆ ನಾವು ಹೇಗೆ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ಇದು ಹಿಂಸೆಯಲ್ಲ. ಹತ್ತು ದಿನದ ಚಿಕಿತ್ಸೆ ಬಳಿಕ ಮನೆಯಲ್ಲೂ ಅದನ್ನು ಅನುಸರಿಸಬೇಕಿದೆ ಎಂದರು.
ಪ್ರಸಿದ್ಧ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ಮಾತನಾಡಿ, ಒಂದೊಂದು ಮಾತಿನಲ್ಲಿಯೂ ಹಾಸ್ಯ ನೋಡಬಹುದು. ಮನೆ ಮನೆಯಲ್ಲಿ ಹಾಸ್ಯವಿದೆ. ಹಾಸ್ಯವನ್ನು ಹಾಸ್ಯವಾಗಿ ಸ್ವೀಕಾರ ಮಾಡಬೇಕು ಎಂದರು.
ಯಾವುದೇ ಕಲೆ ಆದರೂ ಆ ಕಲೆಯನ್ನು ಉಳಿಸಬೇಕಾಗಿದೆ. ಮುಖ್ಯವಾಗಿ ದೇಶೀಯ ಕಲೆ ಉಳಿಸಿ ಬೆಳೆಸಬೇಕಿದೆ ಎಂದರು.
ನಿಸರ್ಗ ಮನೆಯ ವೈದ್ಯ, ಲೇಖಕ ಡಾ. ವೆಂಕಟರಮಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಬಳಿಕ ತುಳಸಿ ಹೆಗಡೆ ಅವಳಿಂದ ವಿಶ್ವಶಾಂತಿ ಸರಣಿಯ ‘ವಂಶೀ ವಿಲಾಸ’ ಯಕ್ಷನೃತ್ಯ ರೂಪಕ ಪ್ರದರ್ಶನ ಕಂಡಿತು.