Slide
Slide
Slide
previous arrow
next arrow

ವ್ಯವಸ್ಥಿತ ಜೇನು ಕೃಷಿಯಿಂದ ಎಲ್ಲರೂ ಲಾಭ ಗಳಿಸಲು ಸಾಧ್ಯ: ಮಧುಕೇಶ್ವರ ಹೆಗಡೆ

300x250 AD

ಶಿರಸಿ: ವ್ಯವಸ್ಥಿತವಾಗಿ ಜೇನು ಕೃಷಿಯನ್ನು ನಡೆಸಿದರೆ ಯಾರೂ ಬೇಕಿದ್ದರೂ ಲಾಭಗಳಿಸಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೊಗಳಿದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಕಲ್ಲಳ್ಳಿ ಹೇಳಿದರು.

ಅವರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ ಹಾಗೂ ತೋಟಗಾರಿಕಾ ಮೇಳದಲ್ಲಿ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಜೇನು ಕೃಷಿ ಹಾಗೂ ಅದರ ಮೌಲ್ಯವರ್ಧನೆಯ ಕುರಿತು ಮುಖ್ಯ ವಕ್ತಾರರಾಗಿ ಮಾತನಾಡಿದರು.

ಜೇನು ಹಾಗೂ ಜೇನಿನ ಉಪ ಉತ್ಪನ್ನಗಳ ಮೂಲಕ ಸಾಕಷ್ಟು ಲಾಭದಾಯಕವಾಗಿ ಈ ಕೃಷಿಯನ್ನು ನಡೆಸಬಹುದು ಬೇರೆ ಬೇರೆ ಮೌಲ್ಯವರ್ತನೆಯ ವಸ್ತುಗಳ ಮೂಲಕ ಮಾರುಕಟ್ಟೆಯನ್ನು ಕೂಡ ಕಂಡುಕೊಳ್ಳಲು ಸಾಧ್ಯವಿದೆ. ಈಚೆಗೆ ಜೇನು ಪರಾಗ ಬಳಸಿ ಮೈ ಬಳಕೆಯ ಸೋಪನ್ನು ಕೂಡ ತಯಾರಿಸುತ್ತಿರುವದಾಗಿ ಹೇಳಿದರು.

300x250 AD

ಜೇನು ಕೃಷಿಯಲ್ಲಿ ಜೇನುಪೆಟ್ಟಿಗೆಯ ನಿರ್ವಹಣೆ, ತುಪ್ಪ ತೆಗೆಯುವ ವಿಧಾನ ಅದರ ಕುಟುಂಬವನ್ನ ಒಡೆಯುವ ಕ್ರಮ ಸಮರ್ಪಕವಾಗಿ ತಿಳಿದುಕೊಂಡರೆ ಒಂದರಿಂದ ಎರಡು ಎರಡರಿಂದ ನಾಲ್ಕು ಮಾದರಿಯಲ್ಲಿ ಜೇನಿನ ವ್ಯವಸಾಯವನ್ನ ವಿಸ್ತರಿಸಿಕೊಳ್ಳಲು ಅವಕಾಶವಿದೆ ಮನೆಯ ಎದುರುಗಡೆ ಇರುವ ಸ್ವಲ್ಪ ಜಾಗದಲ್ಲಿ ಕೂಡ ಜೇನು ಕೃಷಿಯನ್ನು ಆರಂಭಿಸಿದರೆ, ತರಕಾರಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಬೆಳೆಯ ಇಳುವರಿ ಕೂಡ ಅಧಿಕವಾಗಿ ಪಡೆಯಲು ಜೇನು ನಡೆಸುವ ಪರಾಗಸ್ಪರ್ಶದಿಂದ ಸಾಧ್ಯವಾಗುತ್ತದೆ ಎಂದರು.
ಈ ವೇಳೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ ಜಗದೀಶ್, ಡಾ.ಹೇಮ್ಲಾ ನಾಯಕ್, ಅಡಿಕೆ ಪತ್ರಿಕೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆ ಡಾ.ನಾಗರಾಜಪ್ಪ ಅಡಿವೇರ್ ಡಾ. ಎನ್ ಪ್ರಕಾಶ್ ಇತರರು ಇದ್ದರು.

Share This
300x250 AD
300x250 AD
300x250 AD
Back to top