Slide
Slide
Slide
previous arrow
next arrow

ಮೊಬೈಲ್ ಹಾವಳಿಯಿಂದಾಗಿ ಪುಸ್ತಕ ಓದುಗರ ಸಂಖ್ಯೆ ಕ್ಷೀಣ: ವಿ.ಉಮಾಕಾಂತ ಭಟ್

300x250 AD

ಶಿರಸಿ: ಮೊಬೈಲ್ ಹಾವಳಿಯಿಂದಾಗಿ ಪುಸ್ತಕ ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬರೆಯುವುದು ಮಸ್ತಕ, ಪುಸ್ತಕವಲ್ಲ. ಮಸ್ತಕ ಬರೆಯುವ ಅರ್ಹತೆ, ತೀವ್ರತೆ ಎರಡೂ ಇದ್ದರೆ ಪುಸ್ತಕ ಬದುಕುಳಿಯುತ್ತದೆ ಎಂದು ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕ ಹಾಗೂ ನೆಮ್ಮದಿ ಓದುಗರ ಬಳಗದ ಸಂಯುಕ್ತಾಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ಜರುಗಿದ ಕೃತಿಗಳ ಅವಲೋಕನ ಮತ್ತು ಕವಿಗೋಷ್ಠಿಯಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಜಿ.ಎ.ಹೆಗಡೆ ಸೋಂದಾ ಅವರು ತತ್ವಜ್ಞಾನಿ ಇಮ್ಯಾನುವೆಲ್ ಕೌಂಟ್ ಕುರಿತು ಹೇಳುತ್ತಾ ಸಮಯದ ಬಳಕೆಯ ಮಹತ್ವದ ಕುರಿತು ಮನೋಜ್ಞವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಅಶೋಕ ಹಾಸ್ಯಗಾರ ಅವರು ಶಬ್ಧಗಳಿಗೆ ಜೀವಂತಿಕೆ ತುಂಬುವುದೇ ಸಾಹಿತ್ಯ. ಶಬ್ಧಗಳನ್ನು ಸಮಯೋಚಿತವಾಗಿ, ಗಂಭೀರವಾಗಿ ಬಳಸಿ ಸಾಹಿತ್ಯ ಕಟ್ಟಿಕೊಡಬೇಕು ಎಂದು ಹೇಳುತ್ತಾ, ಕೃತಿಗಳ ಅವಲೋಕನ ಹೇಗಿರಬೇಕು? ಎನ್ನುವ ಕುರಿತು ಔಚಿತ್ಯಪೂರ್ಣವಾಗಿ ಮಾತನಾಡಿದರು.
ವಿದ್ಯಾವಾಚಸ್ಪತಿ ಎಂದು ಖ್ಯಾತರಾಗಿರುವ ಉಮಾಕಾಂತ ಭಟ್ ಕೆರೆಕೈ ಅವರ ಜೀವಮಾನ ಕವನ ಸಂಕಲನವನ್ನು ಕವಯತ್ರಿ ರಾಜಲಕ್ಷ್ಮಿ ಭಟ್ ಅವಲೋಕಿಸಿ ಅದರೊಳಗಿನ ನನ್ನ ನೆರಳು. ಕವನದ ಗಾಯನ ಮಾಡಿದರು. ಉಮಾಕಾಂತ ಅವರ ಮತ್ತೊಂದು ಚಿರಂತನ ಕೃತಿಯನ್ನು ಪ್ರೊ.ಡಿ.ಎಮ್.ಭಟ್ ಕುಳವೆಯವರು ಅತ್ಯತ್ತಮವಾಗಿ ಅವಲೋಕಿಸಿ ತಮ್ಮ ಪ್ರತಿಭೆಯನ್ನು ಮೆರೆದರು.
ಗಂಗಾಬಾಯಿ ಹೆಗಡೆಯವರ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು, ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆಯನ್ನು ಕೇ.ಕ.ಸಾ.ವೇ ಅಧ್ಯಕ್ಷರಾದ ಕೃಷ್ಣ ಪದಕಿ ಅವರು ನೆರವೇರಿಸಿದರು. ಜಯಪ್ರಕಾಶ್ ಹಬ್ಬು, ಜಲಜಾಕ್ಷಿ ಶೆಟ್ಟಿ, ಸಾವಿತ್ರಿ ಶಾಸ್ತ್ರಿ, ಸುನೀತಾ ಹೆಗಡೆ ಉಮೇಶ ದೈವಜ್ಞ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಸ್ವರಚಿತ ಕವನ ವಾಚನ ಮಾಡಿದರು. ಸಾಹಿತ್ಯ ವಲಯದ ಜಗದೀಶ ಭಂಡಾರಿ, ಡಿ.ಎಸ್.ನಾಯ್ಕ, ಕೆ.ಎನ್.ಹೊಸ್ಮನಿ, ಎ.ರಾಮ ಭಟ್, ಎಸ್.ವಿ.ಹೆಗಡೆ, ವಿ.ಪಿ.ಹೆಗಡೆ ವೈಶಾಲಿ, ಜಿ.ಕೆ.ರಾಮಪ್ಪ, ಮನೋಹರ ಮಲ್ಮನೆ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top